ಟೀ ಪೌಡರ್ ನಲ್ಲಿ ಆ್ಯಂಟಿ ಆಕ್ಸಿಡೆಂಟ್ ಇರುತ್ತದೆ. ಕುದ್ದಿರುವ ಟೀ ಪೌಡರ್ ಅನ್ನು ತೊಳೆದು ಗಾಯದ ಮೇಲೆ ಹಚ್ಚಿದರೆ ಗಾಯ ಗುಣವಾಗುತ್ತದೆ.
ಟೀ ಪೌಡರ್ ಕಂಡೀಶನರ್ ನಂತೆ ಕೆಲಸ ಮಾಡುತ್ತದೆ. ಒಮ್ಮೆ ಕುದ್ದ ಟೀ ಪೌಡರ್ ಅನ್ನು ಮತ್ತೆ ಕುದಿಸಿ ತಣ್ಣಗಾದ ಮೇಲೆ ಕೂದಲಿಗೆ ಹಚ್ಚಿ. ಕೂದಲು ಹೊಳಪನ್ನು ಪಡೆಯುತ್ತದೆ.
ಬಳಸಿದ ಟೀ ಪೌಡರ್ ಅನ್ನು ಒಣಗಿಸಿ ಕಾಬೂಲ್ ಕಡಲೆಯ ಜೊತೆ ಹಾಕಿದರೆ ಕಡಲೆಯ ಬಣ್ಣ ಚೆನ್ನಾಗಿ ಬರುತ್ತದೆ.
ಟೀ ಪೌಡರ್ ಕುದಿಸಿದ ನೀರಿನಿಂದ ಫರ್ನಿಚರ್ ಗಳನ್ನು ಸ್ವಚ್ಛಗೊಳಿಸಿದರೆ ಅವು ಹೊಳಪು ಪಡೆಯುತ್ತವೆ.
ಟೀ ಪೌಡರ್ ಅನ್ನು ಗಿಡಗಳಿಗೆ ಹಾಕಿದರೆ ಅದು ಗೊಬ್ಬರದಂತೆ ಕೆಲಸ ಮಾಡುತ್ತದೆ.