alex Certify ಬಳಕೆದಾರರ ಅನುಕೂಲಕ್ಕೆ ಮತ್ತೊಂದು ಮಹತ್ವದ ವೈಶಿಷ್ಟ್ಯ ತರಲಿದೆ ಗೂಗಲ್​ ಮ್ಯಾಪ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಳಕೆದಾರರ ಅನುಕೂಲಕ್ಕೆ ಮತ್ತೊಂದು ಮಹತ್ವದ ವೈಶಿಷ್ಟ್ಯ ತರಲಿದೆ ಗೂಗಲ್​ ಮ್ಯಾಪ್​

ಯಾವುದಾದರೂ ಟ್ರಿಪ್​ಗೆ ಪ್ಲಾನ್​ ಮಾಡಬೇಕೆಂದುಕೊಂಡವರಿಗೆ ಇನ್ಮುಂದೆ ಗೂಗಲ್​ ಮ್ಯಾಪ್​ ಇನ್ನಷ್ಟು ಸಹಾಯ ಮಾಡಲಿದೆ. ದೈತ್ಯ ಸರ್ಚ್​ ಇಂಜಿನ್​ ಗೂಗಲ್​ ಈ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದು ಇನ್ಮುಂದೆ ಗೂಗಲ್​ ಮ್ಯಾಪ್​ನಲ್ಲಿ ಟೋಲ್​ ಶುಲ್ಕದ ವಿವರಗಳನ್ನೂ ನೀಡಲಾಗುತ್ತದೆ ಎಂದು ಹೇಳಿದೆ.

ರಸ್ತೆಯಲ್ಲಿ ಪ್ರಯಾಣಿಸುವ ಮುನ್ನವೇ ಆ ರಸ್ತೆಯ ಮಾರ್ಗದಲ್ಲಿ ವ್ಯಯಿಸಬೇಕಾಗುವ ಟೋಲ್​ ಶುಲ್ಕದ ಮಾಹಿತಿ ಮೊದಲೇ ತಿಳಿದರೇ ವಾಹನ ಸವಾರರು ತಮ್ಮ ರಸ್ತೆ ಮಾರ್ಗವನ್ನು ಬದಲಾಯಿಸಿ ಟೋಲ್​ನಿಂದ ತಪ್ಪಿಸಿಕೊಳ್ಳಲು ಸಹಾಯವಾಗುತ್ತದೆ.

ನೀವು ಯಾವ ಜಾಗಕ್ಕೆ ತೆರಳಬೇಕು ಎಂದುಕೊಂಡಿದ್ದೀರೋ ಅಲ್ಲಿಯವರೆಗೆ ನೀವು ನೀಡಬೇಕಾಗಿ ಬರುವ ಅಂದಾಜು ಟೋಲ್​ ಶುಲ್ಕದ ವಿವರವನ್ನು ಗೂಗಲ್​ ಮ್ಯಾಪ್​ ನೀಡುತ್ತದೆ. ಅಲ್ಲದೇ ಇದರ ಜೊತೆಯಲ್ಲಿ ಟ್ರಾಫಿಕ್​ ಸಿಗ್ನಲ್​ಗಳು ಹಾಗೂ ಸ್ಟಾಪ್​​ ಚಿಹ್ನೆಗಳ ಬಗ್ಗೆಯೂ ಗೂಗಲ್​ ಮ್ಯಾಪ್​ ಮಾಹಿತಿ ನೀಡಲಿದೆ.

ಗೂಗಲ್​ ಮ್ಯಾಪ್​ನ ಬಲಭಾಗದಲ್ಲಿ ಇರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್​ ಮಾಡಿದರೆ ನಿಮಗೆ ಅವಾಯ್ಡ್​ ಟೋಲ್ಸ್​ ಎಂಬ ಆಯ್ಕೆ ಸಿಗಲಿದೆ. ಗೂಗಲ್​ ಮ್ಯಾಪ್​ ಭಾರತ, ಅಮೆರಿಕ, ಜಪಾನ್​ ಹಾಗೂ ಇಂಡೋನೇಷ್ಯಾದ 2 ಸಾವಿರಕ್ಕೂ ಅಧಿಕರ ರಸ್ತೆಗಳ ಟೋಲ್​ ಶುಲ್ಕದ ಅಂದಾಜು ವಿವರವನ್ನು ನೀಡಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...