
ಫ್ಲಾಶ್ ಕಾಲ್ಸ್ ಆಯ್ಕೆ ಮೂಲಕ ಬಳಕೆದಾರರ ದೂರವಾಣಿ ಕರೆಯನ್ನು ಎಸ್‌ಎಂಎಸ್ ಬದಲಿಗೆ ಆಟೋಮೇಟೆಡ್ ಕರೆ ಮೂಲಕ ಖಾತ್ರಿ ಪಡಿಸಿಕೊಳ್ಳಬಹುದಾಗಿದೆ. ಇದರಿಂದಾಗಿ ಒಂದು ವೇಳೆ ಫೋನ್ ಕಳ್ಳತನವಾಗಿದ್ದಲ್ಲಿ, ಬಳಕೆದಾರರ ಖಾತೆಯ ಸುರಕ್ಷತೆಯನ್ನು ಖಾತ್ರಿ ಪಡಿಸಬಹುದಾಗಿದೆ.
ಇದರಂತೆಯೇ, ಬಳಕೆದಾರರು ನಿರ್ದಿಷ್ಟ ಸಂದೇಶಗಳನ್ನು ಆಯಾ ಮಟ್ಟದಲ್ಲಿ ರಿಪೋರ್ಟಿಂಗ್ ಮಾಡುವ ಮೂಲಕ ವಾಟ್ಸಾಪ್ ಗಮನಕ್ಕೆ ತಂದು ಬ್ಲಾಕ್ ಮಾಡಬಹುದಾಗಿದೆ.
ಏನಿದು ಫ್ಲಾಶ್ ಕಾಲ್ ?
ಇದುವರೆಗೂ ನೀವು ನಿಮ್ಮ ಫೋನನ್ನು ಪ್ರತಿ ಬಾರಿ ಬದಲಿಸಿದಾಗ ಹೊಸ ಡಿವೈಸ್‌ನಲ್ಲಿ ವಾಟ್ಸಾಪ್ ಸಕ್ರಿಯಗೊಳಿಸಲು ಎಸ್‌ಎಂಎಸ್ ಮೂಲಕ ಬರುವ ಓಟಿಪಿಯ ಅಗತ್ಯವಿತ್ತು.
ಫ್ಲಾಶ್ ಕಾಲ್‌ಗಳ ಮೂಲಕ ಬಳಕೆದಾರರು ಸ್ವಯಂಚಾಲಿತ ಕರೆಯ ಮೂಲಕ ವಾಟ್ಸಾಪ್ ಅನ್ನು ತಮ್ಮ ಹೊಸ ಡಿವೈಸ್‌ನಲ್ಲಿ ಸಕ್ರಿಯಗೊಳಿಸುವ ಆಯ್ಕೆಯನ್ನು ಬಳಕೆದಾರರಿಗೆ ನೀಡಲಾಗಿದೆ.
ಅನಗತ್ಯವಾದ ಮೆಸೇಜ್‌ಗಳು ಬರುವ ಪ್ಲಾಟ್‌ಫಾರಂಗಳನ್ನು ಬ್ಲಾಕ್ ಮಾಡುವ ಸುಲಭವಾದ ಆಯ್ಕೆಯನ್ನು ವಾಟ್ಸಾಪ್ ನೀಡಿದೆ. ಕಿರಿಕಿರಿ ಸಂದೇಶಗಳು ಬರುವ ಕಾಂಟಾಕ್ಟ್ ಮೇಲೆ ದೀರ್ಘವಾಗಿ ಬೆರಳನ್ನು ಒತ್ತಿ ಹಿಡಿದು ಆ ಬಳಕೆದಾರರನ್ನು ರಿಪೋರ್ಟ್ ಅಥವಾ ಬ್ಲಾಕ್ ಮಾಡಬಹುದಾಗಿದೆ.