ಬೆಂಗಳೂರು- ವಾಟ್ಸಾಪ್ ತನ್ನ ಗ್ರಾಹಕರಿಗೆ ಆಗಾಗ ಅಪ್ ಡೇಟ್ ಮಾಡುವ ಮೂಲಕ ಹೊಸ ಹೊಸ ಫೀಚರ್ ಗಳನ್ನು ನೀಡುತ್ತಲೇ ಇದೆ. ಇದೀಗ ಮತ್ತೊಂದು ವೈಶಿಷ್ಟ್ಯ ನೀಡಲು ಮುಂದಾಗಿದೆ. ಅದೇ ಗ್ರೂಪ್ ಸದಸ್ಯರ ಹೆಚ್ಚಳ.
ಹೌದು, ಮೊದಲು ವಾಟ್ಸಾಪ್ ಗ್ರೂಪ್ ಸದಸ್ಯರ ಮಿತಿ 256 ಇತ್ತು. ನಂತರ ಅದು 512 ಕ್ಕೆ ಏರಿಸಲಾಯ್ತು. ಇದೀಗ ಮತ್ತೆ ಈ ಮಿತಿ ಏರಿಕೆಯಾಗಿದೆ. ಈಗ 1024 ಕ್ಕೆ ಏರಿಸಲು ಚಿಂತಿಸಲಾಗಿದೆ. ಅಂದು ಈಗಿರುವುದಕ್ಕಿಂತ ದುಪ್ಪಟ್ಟು ಏರಿಸಲಾಗುತ್ತದೆ.
ಸದ್ಯ ಇದರ ಪ್ರಯೋಗ ನಡೆಯುತ್ತಿದ್ದು, ಪರೀಕ್ಷೆ ಯಶಸ್ವಿಯಾದರೆ ಗ್ರೂಪ್ ಮಿತಿ ಏರಿಕೆಯಾಗಲಿದೆ. ಈಗಾಗಲೇ ಗ್ರೂಪ್ ಅಡ್ಮಿನ್ ಗಳಿಗೆ ವಿಶೇಷ ಅಧಿಕಾರಗಳನ್ನು ನೀಡಲಾಗಿದೆ.