alex Certify ಬಳಕೆದಾರರಿಗಾಗಿ ವಾಟ್ಸಾಪ್‌ ಪರಿಚಯಿಸ್ತಿದೆ ಹೊಸ ಫೀಚರ್‌, ಇಲ್ಲಿದೆ ಸಂಪೂರ್ಣ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಳಕೆದಾರರಿಗಾಗಿ ವಾಟ್ಸಾಪ್‌ ಪರಿಚಯಿಸ್ತಿದೆ ಹೊಸ ಫೀಚರ್‌, ಇಲ್ಲಿದೆ ಸಂಪೂರ್ಣ ವಿವರ

ಆಗಾಗ WhatsApp ಒಂದಿಲ್ಲೊಂದು ಬದಲಾವಣೆಗಳನ್ನು ಮಾಡುತ್ತಲೇ ಇರುತ್ತದೆ. ಇದೀಗ ವಾಟ್ಸಾಪ್‌ನಲ್ಲಿ ಕಳಿಸಿದ ಮೆಸೇಜ್‌ಗಳನ್ನು ಎರಡು ದಿನಗಳ ನಂತರ ಡಿಲೀಟ್‌ ಮಾಡಲು ಬಳಕೆದಾರರಿಗೆ ಅವಕಾಶ ಮಾಡಿಕೊಡ್ತಿದೆ. ಇದಕ್ಕಾಗಿಯೇ ಹೊಸ ಫೀಚರ್‌ ಅನ್ನು ಅಳವಡಿಸ್ತಾ ಇದೆ.

ಈವರೆಗೆ ನೀವೇವಾದ್ರೂ ಆಕಸ್ಮಿಕವಾಗಿ ವಾಟ್ಸಾಪ್‌ ಮೆಸೇಜ್‌ಗಳನ್ನು ಯಾರಿಗಾದರೂ ಕಳಿಸಿಬಿಟ್ಟಿದ್ದರೆ ಅದನ್ನು ಒಂದು ಗಂಟೆಯ ಒಳಗೆ ಡಿಲೀಟ್‌ ಮಾಡಲು ಅವಕಾಶವಿತ್ತು. ಕೇವಲ ಮೆಸೇಜ್‌ ಮಾತ್ರವಲ್ಲ, ಫೋಟೋ, ವಿಡಿಯೊಗಳನ್ನು ಕೂಡ ಡಿಲೀಟ್‌ ಮಾಡಬಹುದು. ಆದ್ರೆ ಇನ್ಮೇಲೆ 2 ದಿನಗಳ ನಂತರ ಕೂಡ ಡಿಲೀಟ್‌ ಮಾಡಲು ಸಾಧ್ಯವಾಗಲಿದೆ.

WhatsApp ಅಪ್‌ಡೇಟ್‌ಗಳ ಟ್ರ್ಯಾಕರ್ WABetaInfo ನಿಂದ ಗುರುತಿಸಲ್ಪಟ್ಟಿದೆ. ಈ ವೈಶಿಷ್ಟ್ಯವನ್ನು Android ಆವೃತ್ತಿ 2.22.4.10 ಗಾಗಿ ಹೊರತರಲಾಗಿದೆ. ಮೆಸೇಜ್‌ ಸೆಂಡ್‌ ಮಾಡಿದ ನಂತರ ಬಳಕೆದಾರರು ನಿಖರವಾಗಿ ಎರಡು ದಿನಗಳು ಮತ್ತು 12 ಗಂಟೆಗಳ ನಂತರ ಅವುಗಳನ್ನು ಡಿಲೀಟ್‌ ಮಾಡಬಹುದು.

ಇದಲ್ಲದೆ WhatsApp ಮತ್ತೊಂದು ಡಿಲೀಟ್ ಸಂಬಂಧಿತ ಫೀಚರ್‌ ಅನ್ನು ಅಭಿವೃದ್ಧಿಪಡಿಸಲು ಶ್ರಮಿಸುತ್ತಿದೆ. ಚಾಟ್‌ನಲ್ಲಿರುವ ಯಾವುದೇ ಸಂದೇಶಗಳು ಮತ್ತು ಮೀಡಿಯಾ ಫೈಲ್‌ಗಳನ್ನು ಡಿಲೀಟ್‌ ಮಾಡಲು ಗ್ರೂಪ್‌ ಅಡ್ಮಿನ್‌ಗೆ ಈ ಫೀಚರ್‌ ಅನುಮತಿಸುತ್ತದೆ. ಇದು ಇನ್ನೂ ಪ್ರಾಯೋಗಿಕ ಹಂತದಲ್ಲಿದ್ದು, ಸಾಮಾನ್ಯ ಬಳಕೆದಾರರು ಈ ಫೀಚರ್‌ ಬಳಸಿಕೊಳ್ಳಲು ಕೊಂಚ ಕಾಯಬೇಕಾಗಬಹುದು.

ವಾಟ್ಸಾಪ್ ಬಳಕೆದಾರರು ತಮ್ಮ ಆನ್‌ಲೈನ್ ಸ್ಥಿತಿಯನ್ನು ನಿರ್ದಿಷ್ಟ ಜನರಿಂದ ಮರೆಮಾಡಲು ಸಹ ಅವಕಾಶ ಕಲ್ಪಿಸಲಾಗುತ್ತಿದೆ. ಆನ್‌ಲೈನ್‌ನಲ್ಲಿದ್ದಾರೋ ಇಲ್ಲವೋ ಎಂಬುದನ್ನು ತೋರಿಸಲು ಇಷ್ಟಪಡದೇ ಇರುವವರು ಈ ಫೀಚರ್‌ ಅನ್ನು ಬಳಸಿಕೊಳ್ಳಬಹುದು. ಭಾರತ ಸೇರಿದಂತೆ ಪ್ರಪಂಚದಾದ್ಯಂತದ ಅನೇಕರು ಇನ್ನೂ ಮನೆಯಿಂದಲೇ ಕೆಲಸ ಮಾಡುತ್ತಿರುವುದರಿಂದ ಆನ್‌ಲೈನ್‌ ಎಂಬುದನ್ನು ಹೈಡ್‌ ಮಾಡುವ ಫೀಚರ್‌ ಹೆಚ್ಚು ಉಪಯುಕ್ತವಾಗಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...