
ಬಲ್ಬ್ ಬದಲಿಸುವಾಗ ವಿದ್ಯುತ್ ತಗುಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ನಡೆದಿದೆ.
ಸಾಗರದ ಶಾಂತಿನಗರ ನಿವಾಸಿ 33 ವರ್ಷದ ರೂಪ್ ಸಿಂಗ್ ಮೃತಪಟ್ಟವರಾಗಿದ್ದು, ಇವರು ಬಲ್ಬ್ ಬದಲಿಸುವಾಗ ಈ ಅವಘಡ ಸಂಭವಿಸಿದೆ.
ಹಾಳಾಗಿದ್ದ ಬಲ್ಬ್ ತೆಗೆದು ಬೇರೆ ಬಲ್ಬ್ ಹಾಕುವಾಗ ವಿದ್ಯುತ್ ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.