ಮೊಳಕೆ ಕಾಳುಗಳಿಂದ ನಮ್ಮ ದೇಹಕ್ಕೆ ಸಿಗುವ ಶಕ್ತಿ ಅಪರಿಮಿತ. ಅದರ ಉಪಯೋಗಗಳ ಬಗ್ಗೆ ಬೆಳಕು ಚೆಲ್ಲೋಣ.
ನಮ್ಮ ದೇಹಕ್ಕೆ ಹಸಿರು ತರಕಾರಿಗಳ ಜೊತೆ ಮೊಳಕೆ ಕಾಳುಗಳು ಬಹಳ ಒಳ್ಳೆಯದು. ಇದರಲ್ಲಿ ಫೈಬರ್, ಕಬ್ಬಿಣದ ಅಂಶ ಸಾಕಷ್ಟಿದೆ. ವಿಟಮಿನ್ ಸಿ ಮತ್ತು ಎ ಅಂಶಗಳು ಇರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿರುವವರು ಮೊಳಕೆ ಕಾಳುಗಳನ್ನು ತಿನ್ನುವುದರಿಂದ ಅವರ ಸಮಸ್ಯೆ ಪರಿಹಾರವಾಗುತ್ತದೆ. ಕಬ್ಬಿಣದ ಅಂಶ ಸಾಕಷ್ಟು ಇರುವುದರಿಂದ ಇದು ಕೆಂಪು ರಕ್ತಕಣಗಳ ಸಂಖ್ಯೆಯನ್ನು ನಿಯಂತ್ರಿಸುತ್ತದೆ.
ಇನ್ನು ತೂಕ ಇಳಿಸಲು ವ್ಯಾಯಾಮ ಮಾಡುವವರು ತಮ್ಮ ಆಹಾರದಲ್ಲಿ ಮೊಳಕೆ ಕಾಳನ್ನು ಸೇರಿಸಲೇಬೇಕು. ಇದರಲ್ಲಿ ಫೈಬರ್ ಅಂಶ ಸಾಕಷ್ಟು ಇದ್ದು, ಹೊಟ್ಟೆ ತುಂಬಿರುವ ಅನುಭವ ನೀಡುತ್ತದೆ.
ಚಿಕ್ಕ ಮಕ್ಕಳಿಗೂ ನೆನಸಿದ ಕಾಳನ್ನು ತಿನ್ನಲು ಕೊಡುವುದರಿಂದ ಅವರ ಆರೋಗ್ಯಕ್ಕೂ ಒಳ್ಳೆಯದು.