2 ದೊಡ್ಡ ತೆಂಗಿನ ಕಾಯಿ, ½ ಕೆ.ಜಿ. ಖೋವಾ, 1 ಸ್ಪೂನ್ ಏಲಕ್ಕಿ ಪುಡಿ, 25 ಗ್ರಾಂ ಪಿಸ್ತಾ, 250 ಗ್ರಾಂ ಸಕ್ಕರೆ, 1 ಸ್ಪೂನ್ ರೋಸ್ ಎಸೆನ್ಸ್, 25 ಗ್ರಾಂ ಬಾದಾಮಿ.
ತಯಾರಿಸುವ ವಿಧಾನ:
ಕೊಬ್ಬರಿಯನ್ನು ತುರಿದುಕೊಂಡು 250 ಗ್ರಾಂ ಸಕ್ಕರೆಯನ್ನು ನೀರಿನಲ್ಲಿ ಹಾಕಿ, ಅದು ಮೂರನೇ ಒಂದು ಭಾಗದಷ್ಟು ಇಂಗುವವರೆಗೂ ಕುದಿಸಿರಿ. ನಂತರದಲ್ಲಿ ಅದಕ್ಕೆ ತುರಿದ ಕೊಬ್ಬರಿ. ಖೋವಾ ಹಾಕಿ ಚೆನ್ನಾಗಿ ಕಲೆಸಿರಿ. ಪಿಸ್ತಾ ಮತ್ತು ಬಾದಾಮಿಯನ್ನು ಚೂರುಗಳಾಗಿ ಮಾಡಿ ಹಾಕಿರಿ.
ನಂತರದಲ್ಲಿ ಏಲಕ್ಕಿ ಪುಡಿ, ರೋಸ್ ಎಸೆನ್ಸ್ ಬೆರೆಸಿ ಎಲ್ಲವನ್ನು ಚೆನ್ನಾಗಿ ಚಮಚದಿಂದ ತಿರುವಿರಿ. ಮಿಶ್ರಣ ತಳ ಬಿಟ್ಟು ಬಂದ ನಂತರ ತುಪ್ಪ ಸರಿದ ತಟ್ಟೆಗೆ ಅದನ್ನು ಹಾಕಿರಿ. ಅದು ಆರಿದ ನಂತರ ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿ ತಿನ್ನಲು ಕೊಡಿ.