
ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಐತಿಹಾಸಿಕ ಗೆಲುವು ಸಾಧಿಸಿದ್ದಕ್ಕೆ ರಾಜ್ಯದ ಜನತೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಧನ್ಯವಾದ ಹೇಳಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಬಲಾಢ್ಯರನ್ನು ಬಡವರ ಶಕ್ತಿ ಸೋಲಿಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಬಡವರ ಪರ ಹೋರಾಟ ಮಾಡಿದೆ. ನಾವು ದ್ವೇಷದಿಂದ ಈ ಯುದ್ಧವನ್ನು ಮಾಡಿಲ್ಲ. ಮುಕ್ತ ಹೃದಯದಿಂದ, ಪ್ರೀತಿಯಿಂದ ಎದುರಿಸಿದ್ದೇವೆ. ಈ ದೇಶದ ಜನ ಪ್ರೀತಿಯನ್ನು ಇಷ್ಟಪಡುತ್ತಾರೆ. ಕರ್ನಾಟಕದ ಜನತೆ ಪ್ರೀತಿಯನ್ನು ತೋರಿಸಿಕೊಟ್ಟಿದ್ದಾರೆ. ದ್ವೇಷದ ಮಾರ್ಕೆಟ್ ಮುಚ್ಚಿ ಪ್ರೀತಿಯ ಅಂಗಡಿ ತೆರೆದಿದ್ದೇವೆ ಎಂದು ಹೇಳಿದ್ದಾರೆ.
ಇದು ನಮ್ಮ ಜಯ ಅಲ್ಲ, ಇಡೀ ಕರ್ನಾಟಕ ಜನತೆಯ ಗೆಲುವು. ಸಂಪುಟದ ಮೊದಲ ದಿನವೇ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದು ಹೇಳಿದರು.