ದಪ್ಪಗಿದ್ದವರು ಸಣ್ಣಗಾಗಲು ಡಯೆಟ್ ಮಾಡುವುದು ನಿಮಗೆ ಗೊತ್ತೇ ಇದೆ. ಇದಕ್ಕಾಗಿ ಅವರು ಪಿಜ್ಜಾ, ಬರ್ಗರ್ ನಂತಹವುಗಳನ್ನು ತ್ಯಜಿಸಲೇಬೇಕಾಗುತ್ತದೆ. ಆದರೂ, ಆಟಿಕೆ ಅಂಗಡಿಯಲ್ಲಿ ಮಕ್ಕಳು ಬೇಕು ಎಂದು ಹಠ ಮಾಡುವಂತೆ, ಪಿಜ್ಜಾ, ಬರ್ಗರ್ ನೋಡಿದಾಗಲೆಲ್ಲಾ ಮನಸ್ಸು ಆ ಕಡೆ ಎಳೆಯುತ್ತದೆ. ಆದರೆ, ಚೀನಾದಲ್ಲಿ ಮ್ಯಾಕ್‌ಡೊನಾಲ್ಡ್ ಈ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಿದೆ.
ಶಾಂಘೈನಲ್ಲಿರುವ ಮ್ಯಾಕ್‌ಡೊನಾಲ್ಡ್ ಔಟ್‌ಲೆಟ್‌ನಿಂದ ಮಹಿಳೆಯೊಬ್ಬಳ ವಿಡಿಯೋ ಕ್ಲಿಪ್ ಅನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ನಂತರ ಇದೀಗ ಭಾರಿ ವೈರಲ್ ಆಗಿದೆ. ಟೇಬಲ್‌ಗೆ ಜೋಡಿಸಲಾದ ಬೈಸಿಕಲ್ ಸೀಟಿನ ಮೇಲೆ ಮಹಿಳೆ ಕುಳಿತಿದ್ದಾಳೆ. ಅಯ್ಯೋ ಅಲ್ಲೇನು ಮಾಡುತ್ತಿದ್ದಾಳಪ್ಪಾ ಇವಳು ಅಂತಾ ಅನ್ಕೊತ್ತಿದ್ದೀರಾ..?
ಈಕೆ ಬರ್ಗರ್ ಅನ್ನು ಕಚ್ಚಿ ತಿನ್ನುತ್ತಾ, ಜೊತೆಗೆ ಪಾನೀಯವನ್ನು ಕುಡಿಯುತ್ತಿದ್ದಾಳೆ. ಜೊತೆಗೆ ಸೈಕಲ್ ಅನ್ನು ಕೂಡ ತುಳಿಯುತ್ತಿರುವ ದೃಶ್ಯ ಕಂಡುಬಂದಿದೆ. ಇದರಿಂದ ಬರ್ಗರ್ ಕೂಡ ತಿಂದ ಹಾಗೆ ಆಗುತ್ತದೆ. ಜೊತೆಗೆ ನಿಮ್ಮ ಕ್ಯಾಲೊರಿಯು ಕರಗಲು ಸಹಾಯವಾಗುತ್ತದೆ.
ಈ ವಿಡಿಯೋವನ್ನು 1.5 ಮಿಲಿಯನ್ ಮಂದಿ ವೀಕ್ಷಿಸಿದ್ದು, ನೆಟ್ಟಿಗರಿಂದ ಟನ್‌ಗಳಷ್ಟು ಪ್ರತಿಕ್ರಿಯೆಗಳನ್ನು ಪಡೆದಿದೆ. ಐದು ನಿಮಿಷಗಳ ಸೈಕ್ಲಿಂಗ್‌ನಿಂದ ವ್ಯಕ್ತಿಯು ಸೇವಿಸುವ ಅರ್ಧದಷ್ಟು ಕ್ಯಾಲೊರಿಗಳನ್ನು ಸಹ ಕರಗಿಸಲು ಸಾಧ್ಯವಿಲ್ಲ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.
https://twitter.com/alvinfoo/status/1471993463378161669?ref_src=twsrc%5Etfw%7Ctwcamp%5Etweetembed%7Ctwterm%5E1471993463378161669%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fwoman-rides-exercise-bike-while-eating-burger-at-mcdonald-s-in-china-here-s-the-story-behind-the-viral-video-1890808-2021-12-22