alex Certify ಬರೋಬ್ಬರಿ 74 ವರ್ಷಗಳ ಬಳಿಕ ಮತ್ತೆ ಒಂದಾದ ಕುಟುಂಬ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 74 ವರ್ಷಗಳ ಬಳಿಕ ಮತ್ತೆ ಒಂದಾದ ಕುಟುಂಬ….!

1947ರಲ್ಲಿ ಭಾರತ ವಿಭಜನೆಯ ಸಂದರ್ಭದಲ್ಲಿ ಬೇರ್ಪಟ್ಟಿದ್ದ ಕ್ರಿಶ್ಚಿಯನ್​ ಮಿಥು ಕುಟುಂಬದ ಎರಡನೇ ತಲೆ ಮಾರಿನ ಸದಸ್ಯರು ಕರ್ತಾರ್​ಪುರದ ಗುರುದ್ವಾರದ ದರ್ಬಾರ್​ ಸಾಹಿಬ್​ನಲ್ಲಿ ಭೇಟಿಯಾಗುವ ಮೂಲಕ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.

ಕರ್ತಾರ್‌ಪುರ ಕಾರಿಡಾರ್ ಕುಟುಂಬದ ಎರಡು ಕಡೆಯವರಿಗೆ 74 ವರ್ಷಗಳ ನಂತರ ಮತ್ತೆ ಒಂದಾಗಲು ಅವಕಾಶವನ್ನು ಒದಗಿಸಿತು, ಈ ಎರಡು ಕುಟಂಬವು ಪಂಜಾಬಿ ಸುದ್ದಿ ವಾಹಿನಿಯ ಮೂಲಕ ಪರಸ್ಪರರ ಬಗ್ಗೆ ತಿಳಿದುಕೊಂಡಿತ್ತು.

ನಂಕಾನಾ ಜಿಲ್ಲೆಯ ಮನಾನವಾಲಾ ನಿವಾಸಿ ಶಾಹಿದ್ ರಫೀಕ್ ಮಿಥು ತನ್ನ ಕುಟುಂಬದ 40 ಸದಸ್ಯರೊಂದಿಗೆ ಕರ್ತಾರ್‌ಪುರ ತಲುಪಿದ್ದರೆ, ಪಂಜಾಬ್‌ನ ಅಮೃತಸರ ಜಿಲ್ಲೆಯ ಅಜ್ನಾಲಾ ತಹಸಿಲ್‌ನ ಶಾಹಪುರ್ ಡೋಗ್ರಾನ್‌ನ ನಿವಾಸಿ ಸೋನೋ ಮಿಥು ಶುಕ್ರವಾರ ಕರ್ತಾರ್‌ಪುರ ಮೂಲಕ ಗುರುದ್ವಾರಕ್ಕೆ ಆಗಮಿಸಿದರು. ಒಬ್ಬರನ್ನೊಬ್ಬರು ನೋಡುತ್ತಿದ್ದಂತೆಯೇ ಭಾವುಕಾರದ ಈ ಕುಟುಂಬದವರು ಪರಸ್ಪರ ಆಲಂಗಿಸಿಕೊಂಡು ಭಾವುಕರಾದರು.

1947 ರ ವಿಭಜನೆಯ ಸಮಯದಲ್ಲಿ ಅವರ ಹಿರಿಯ ಸಹೋದರ ಇಕ್ಬಾಲ್ ಮಸಿಹ್ ತನ್ನ ಕುಟುಂಬದೊಂದಿಗೆ ಪಾಕಿಸ್ತಾನಕ್ಕೆ ವಲಸೆ ಹೋಗಿದ್ದರು ಎಂದು ಶಾಹಿದ್ ರಫೀಕ್ ಮಿಥು ಮಾಹಿತಿ ನೀಡಿದರು. ಆದರೆ ಇಕ್ಬಾಲ್ ಸಹೋದರ ಇನಾಯತ್ ಗಲಭೆಯ ಸಮಯದಲ್ಲಿ ದಾರಿ ತಪ್ಪಿ ಪಂಜಾಬ್‌ನಲ್ಲಿ ಉಳಿದುಕೊಂಡರು.

ಸುಮಾರು ಒಂದು ವರ್ಷದ ಹಿಂದೆ ನನ್ನ ಸಂದರ್ಶನವನ್ನು ಪಂಜಾಬಿ ಸುದ್ದಿ ವಾಹಿನಿಯೊಂದು ಪ್ರಸಾರ ಮಾಡಿತು, ಇದರಲ್ಲಿ ನಾನು ವಿಭಜನೆಯ ಸಮಯದಲ್ಲಿ ನಮ್ಮ ಹಿರಿಯರ ಪ್ರತ್ಯೇಕತೆಯ ಬಗ್ಗೆ ಮಾತನಾಡಿದ್ದೇನೆ, ಇದನ್ನು ಪಂಜಾಬ್‌ನಲ್ಲಿರುವ ನಮ್ಮ ಸಂಬಂಧಿಕರು ವೀಕ್ಷಿಸಿದರು, ಅವರು ನಮ್ಮನ್ನು ಸಂಪರ್ಕಿಸಿದರು ಮತ್ತು ನಾವು ಕರ್ತಾರ್‌ಪುರದಲ್ಲಿ ಪುನರ್ಮಿಲನ ಮಾಡಲು ನಿರ್ಧರಿಸಿದೆವು ಎಂದು ಶಾಹಿದ್​ ಮಿಥು ಹೇಳಿದರು. ದುರಾದೃಷ್ಟವಶಾತ್​ ಇಕ್ಬಾಲ್​ ಹಾಗೂ ಇನಾಯತ್​​ ಸಹೋದರರಿಬ್ಬರೂ ನಿಧನರಾಗಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...