alex Certify ಬರೋಬ್ಬರಿ 3,300 ಕಿ.ಮೀ. ಸೈಕಲ್​ ಓಡಿಸಿ ವಿಶ್ವ ದಾಖಲೆ ಬರೆದ 72ರ ವೃದ್ಧೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 3,300 ಕಿ.ಮೀ. ಸೈಕಲ್​ ಓಡಿಸಿ ವಿಶ್ವ ದಾಖಲೆ ಬರೆದ 72ರ ವೃದ್ಧೆ….!

ತಮ್ಮ 72ನೇ ವಯಸ್ಸಿನಲ್ಲಿ ಬೈಸಿಕಲ್​ ಮೂಲಕ ಅಮೆರಿಕವನ್ನು ದಾಟಿದ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಗಿನ್ನಿಸ್​ ದಾಖಲೆಗೆ ಲಿನ್ನಿಯಾ ಸಾಲ್ವೋ ಪಾತ್ರರಾಗಿದ್ದಾರೆ.

ಸೈಕ್ಲಿಸ್ಟ್​ ಈ ವಿಶ್ವ ದಾಖಲೆಯನ್ನು ನಿರ್ಮಿಸಲು 43 ವರ್ಷವನ್ನು ತೆಗೆದುಕೊಂಡಿದ್ದಾರೆ. ಪೆಸಿಫಿಕ್​ ಕರಾವಳಿಯಾದ್ಯಂತ ಲಿನ್ನಿಯಾ 3300 ಕಿಲೋಮೀಟರ್​ಗಿಂತಲೂ ಹೆಚ್ಚು ಸೈಕಲ್​ ಸವಾರಿ ಮಾಡಿದ್ದಾರೆ.

ಲಿನ್ನಿಯಾ ತಮ್ಮ ಕ್ಯಾನಂಡೇಲ್​ ಸಿನಾಪ್ಸ್​ ಎಂಡ್ಯೂರೆನ್ಸ್​ ಬೈಸಿಕಲ್​ನ್ನು ಅಮೆರಿಕ – ಮೆಕ್ಸಿಕೋ ಗಡಿಯಲ್ಲಿರುವ ಸ್ಯಾನ್​ ಯಿಸಿಡ್ರೋ, ಸಿಎಗೆ ಕಡೆಗೆ ಸವಾರಿ ಮಾಡಿದ್ದಾರೆ.

ಈ ವಿಶ್ವ ದಾಖಲೆಯು ಲಿನ್ನಿಯಾ ಸಾಲ್ವೋರ ಬಹುದಿನಗಳ ಕನಸಾಗಿತ್ತು. ಅಮೆರಿಕ ಹಾಗೂ ಕೆನಡಾದಾದ್ಯಂತ ಶಾಂತಿಯನ್ನು ಚಿತ್ರಿಸಲು ಅವರು ಈ ಸಾಹಸವನ್ನು ಮಾಡಿದ್ದಾರೆ. ಸೈಕಲ್​ನಲ್ಲಿ ಸವಾರಿ ಮಾಡುವುದು ಮಾತ್ರ ಲಿನ್ನಿಯಾ ಗುರಿಯಾಗಿರಲಿಲ್ಲ.

ಈ ವಿಚಾರವಾಗಿ ಮಾತನಾಡಿದ ಲಿನ್ನಿಯಾ 1956ರಲ್ಲಿ ನಾನು ನನ್ನ ಸಹೋದರ ಜೊತೆಯಲ್ಲಿ ಸೈಕಲ್​ ಸವಾರಿ ಮಾಡುವಾಗ ಅಪಘಾತವಾಗಿತ್ತು. ಅಂದಿನಿಂದ ನನ್ನ ದೃಷ್ಟಿ ಅಸ್ಪಷ್ಟವಾಯಿತು. ಆದರೆ ಈ ವಿಶೇಷ ಕಣ್ಣುಗಳ ಮೂಲಕವೇ ನಾನು ಈ ಸಾಧನೆ ಮಾಡಿದ್ದೇನೆ ಎಂದು ಹೇಳಿದರು

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...