ತೂಕವನ್ನು ಕಳೆದುಕೊಳ್ಳಲು ಹಾಗೂ ದೇಹವನ್ನು ಫಿಟ್ ಆಗಿಡಲು ಹಲವಾರು ಮಂದಿ ಜಿಮ್‍ನಲ್ಲಿ ವರ್ಕೌಟ್ ಮಾಡುವುದು ಸಾಮಾನ್ಯ. ಆದರೆ, ಮಹಿಳೆಯೊಬ್ಬಳು ಬಾರ್ಬೆಲ್ (ವ್ಯಾಯಾಮದಲ್ಲಿ ಬಳಸುವ ಸಾಧನ) ಅನ್ನು ಎತ್ತುವಾಗ ಪ್ರಾಣ ಕಳೆದುಕೊಂಡಿರುವ ಆಘಾತಕಾರಿ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ.
ಮಹಿಳೆಯು ಸ್ಥಳೀಯ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದಾಗ 400 ಪೌಂಡ್ (ಅಂದಾಜು 181 ಕೆಜಿ) ಬಾರ್ಬೆಲ್ ಅನ್ನು ಎತ್ತಲು ಪ್ರಯತ್ನಿಸಿದ್ದಾರೆ. ಆದರೆ, ಆಕೆ ಭಾರವನ್ನು ಹೊರಲು ಸಾಧ್ಯವಾಗದ ಕಾರಣ, ಅದು ಆಕೆಯ ಮೇಲೆ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೆಕ್ಸಿಕೊದ ರಾಜಧಾನಿ ಮೆಕ್ಸಿಕೊ ಸಿಟಿಯಲ್ಲಿರುವ ಪೆರಾಲ್ವಿಲ್ಲೊ, ಕ್ಯುಹ್ಟೆಮೊಕ್‌ನಲ್ಲಿರುವ ಜಿಮ್‌ನಲ್ಲಿ ಈ ಘಟನೆ ನಡೆದಿದೆ. ಜಿಮ್‌ನಲ್ಲಿನ ಕಣ್ಗಾವಲು ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದ್ದು, ವಿಡಿಯೋ ಇದೀಗ ವೈರಲ್ ಆಗಿವೆ.
ಮಹಿಳೆಯು ಭಾರಿ ತೂಕದ ಬಾರ್ಬೆಲ್ ಅನ್ನು ಎತ್ತಲು ಪ್ರಯತ್ನಿಸುವಾಗ ಸಾಧ್ಯವಾಗದೆ ಆಕೆಯ ಕುತ್ತಿಗೆಯ ಹಿಂಬದಿಯಲ್ಲಿ ಸಿಲುಕಿ ಕೆಳಗೆ ಬೀಳುತ್ತಾಳೆ. ಕೂಡಲೇ ಅಲ್ಲಿದ್ದ ಬೋಧಕ ಎತ್ತಲು ಪ್ರಯತ್ನಿಸಿದ್ರೂ ಸಾಧ್ಯವಾಗುವುದಿಲ್ಲ. ಜಿಮ್ ನಲ್ಲಿದ್ದ ಇತರರು ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ರೂ ಅಷ್ಟೊತ್ತಿಗಾಗಲೇ ಮಹಿಳೆಯ ಪ್ರಾಣಪಕ್ಷಿ ಹಾರಿಹೋಗಿದೆ.
35 ರಿಂದ 40 ವರ್ಷ ವಯಸ್ಸಿನ ಮಹಿಳೆ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದಳು ಮತ್ತು ಘಟನೆ ಸಂಭವಿಸಿದಾಗ ತನ್ನ ಮಗಳ ಜೊತೆಗಿದ್ದಳು. ಇದೀಗ ಪ್ರಕರಣದ ಸಂಬಂಧ ರಾಜ್ಯ ಪ್ರಾಸಿಕ್ಯೂಟರ್ ಕಚೇರಿಯಿಂದ ತನಿಖೆಯನ್ನು ಪ್ರಾರಂಭಿಸಲಾಗಿದ್ದು, ಜಿಮ್ ಮಾಲೀಕನನ್ನು ಬಂಧಿಸಲಾಗಿದೆ. ಮಹಿಳೆ ಭಾರವಾದ ಬಾರ್ಬೆಲ್ ಅನ್ನು ಏಕೆ ಎತ್ತಲು ಪ್ರಯತ್ನಿಸಿದಳು ಎಂಬುದು ಅಸ್ಪಷ್ಟವಾಗಿದ್ದರೂ ತನಿಖೆ ನಡೆಯುತ್ತಿದೆ.
https://twitter.com/Wonderwanderer9/status/1496538034719932427?ref_src=twsrc%5Etfw%7Ctwcamp%5Etweetembed%7Ctwterm%5E1496538034719932427%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fmexican-woman-crushed-to-death-under-181-kg-barbell-she-was-lifting-at-gym-4805966.html