alex Certify ಬರೋಬ್ಬರಿ 104 ವರ್ಷಗಳಿಂದ ಒಂದೇ ಮನೆಯಲ್ಲಿ ವಾಸವಿದ್ದಾರೆ ಈ ವೃದ್ಧೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 104 ವರ್ಷಗಳಿಂದ ಒಂದೇ ಮನೆಯಲ್ಲಿ ವಾಸವಿದ್ದಾರೆ ಈ ವೃದ್ಧೆ….!

ಮನೆಯ ಪೀಠೋಪಕರಣಗಳನ್ನು ಕಾಲ ಕಾಲಕ್ಕೆ ಬದಲಾಯಿಸೋದು ಅಂದರೆ ಎಲ್ಲರಿಗೂ ಇಷ್ಟವಾಗುವ ಕೆಲಸವೇ ಸರಿ. ಅದರಲ್ಲೂ ಸ್ವಂತ ಮನೆ ಅಂದರೆ ಅದರ ಮೇಲಿನ ಕಾಳಜಿ ಇನ್ನಷ್ಟು ಜಾಸ್ತಿಯೇ ಇರುತ್ತದೆ. ಹೀಗಾಗಿ ಮನೆಯನ್ನು ಕಾಲ ಕಾಲಕ್ಕೆ ನವೀಕರಿಸಲಾಗುತ್ತದೆ. ಆದರೆ ಬ್ರಿಟನ್​​ನ ಮಹಿಳೆಯೊಬ್ಬರು ಬರೋಬ್ಬರಿ 104 ವರ್ಷಗಳಿಂದ ಒಂದೇ ಮನೆಯಲ್ಲಿ ವಾಸವಿದ್ದಾರೆ..!

ಹೌದು..! ತಮ್ಮ ಬಾಲ್ಯದಿಂದ ವೃದ್ದಾಪ್ಯದವರೆಗೂ ಈ ಮಹಿಳೆ ಒಂದೇ ಮನೆಯಲ್ಲಿ ವಾಸಿಸಿದ್ದಾರೆ. ಕುತೂಹಲಕಾರಿ ವಿಚಾರ ಅಂದರೆ ಈ ಮನೆಯಲ್ಲಿ ಇದ್ದಾಗಲೇ ಎರಡು ಮಹಾಯುದ್ಧಗಳು, ನಾಲ್ವರು ರಾಜರು ಹಾಗೂ ರಾಣಿಯರ ಆಳ್ವಿಕೆ ಹಾಗೂ 25 ಪ್ರಧಾನಿಗಳ ಆಡಳಿತವನ್ನು ಇವರು ಕಂಡಿದ್ದಾರೆ. ಎಲ್ಸಿ ಜೂನ್​ 1918ರಲ್ಲಿ ಜನಿಸಿದ್ದಾರೆ.

ಈ ಮನೆಯಲ್ಲಿ ಒಂದು ಶತಮಾನವನ್ನು ಎಲ್ಸಿ ಕಳೆದಿದ್ದಾರೆ. ಚಂದ್ರನ ಮೇಲೆ ಮಾನವನ ಮೊದಲ ನಡೆ, ಸೋವಿಯತ್​ ಒಕ್ಕೂಟಗಳ ಪತನ, ಇಂಟರ್ನೆಟ್​ ವಿಕಾಸ ಸೇರಿದಂತೆ ಸಾಕಷ್ಟು ವಿಚಾರಗಳನ್ನು ಇದೇ ಮನೆಯಲ್ಲಿದ್ದುಕೊಂಡು ಎಲ್ಸಿ ನೋಡಿದ್ದಾಳೆ. ಎಲ್ಸಿ ತಂದೆಗೆ ಒಟ್ಟು ಐವರು ಮಕ್ಕಳು. ಅವರಲ್ಲಿ ಕಿರಿಯವರು ಎಲ್ಸಿ. ಎಲ್ಸಿ 14 ವರ್ಷದವರಿದ್ದಾಗ ಅವರ ತಾಯಿ ನ್ಯುಮೋನಿಯಾದಿಂದ ಮೃತಪಟ್ಟಿದ್ದರಂತೆ.

1941ರಲ್ಲಿ 2ನೇ ವಿಶ್ವ ಯುದ್ಧದ ಸಂದರ್ಭದಲ್ಲಿ ಎಲ್ಸಿ ತನ್ನ ಪತಿ ಬಿಲ್ ಜೊತೆ ವಿವಾಹವಾದರು. ವಿವಾಹವಾದ ಬಳಿಕವೂ ಎಲ್ಸಿ ತವರು ಮನೆಯಲ್ಲಿಯೇ ವಾಸಿಸಿದರು. 1960ರ ದಶಕದಲ್ಲಿ ಈ ಮನೆಯನ್ನು ಖರೀದಿ ಮಾಡಿದೆವು. ನನಗೆ ಈ ಮನೆ ಎಲ್ಲವೂ ಆಗಿದೆ. ನಾನೆಂದಿಗೂ ಈ ಮನೆಯನ್ನು ತೊರೆಯಲಾರೆ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...