ಪುಣೆ ಮೂಲದ ಖ್ಯಾತ ಕೇಕ್ ಕಲಾವಿದೆ ಪ್ರಾಚಿ ಧಬಲ್ ದೇಬ್ ಅವರು ತಯಾರಿಸಿರುವ ಬರೋಬ್ಬರಿ 100 ಕೆಜಿ ಸಸ್ಯಾಹಾರಿ ಖಾದ್ಯ ರಾಯಲ್ ಐಸಿಂಗ್ ಕೇಕ್ ರಚಿಸಿದ್ದು, ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಸಾಧನೆ ಮಾಡಿದ್ದಾರೆ.
ಪ್ರಶಸ್ತಿ ವಿಜೇತ ಕೇಕ್ ಕಲಾವಿದೆ ಪ್ರಾಚಿ ಅವರು ರಾಯಲ್ ಐಸಿಂಗ್ನ ಸಂಕೀರ್ಣವಾದ ಕಲೆಯಲ್ಲಿ ಪರಿಣತಿಯನ್ನು ಪಡೆದಿದ್ದಾರೆ. ಯುರೋಪಿಯನ್ ವಾಸ್ತುಶೈಲಿಯಿಂದ ಪ್ರೇರಿತವಾದ ಮೊಟ್ಟೆ ಉಪಯೋಗಿಸದೆ ರಾಯಲ್ ಐಸಿಂಗ್ ಕೇಕ್ ತಯಾರಿಕೆಯಲ್ಲಿ ಹೆಸರುವಾಸಿಯಾಗಿದ್ದಾರೆ. ಅವರು ಯುನೈಟೆಡ್ ಕಿಂಗ್ಡಮ್ನಲ್ಲಿ ಹಿರಿಯ ರಾಯಲ್ ಕೇಕ್ ಐಕಾನ್ ಸರ್ ಎಡ್ಡಿ ಸ್ಪೆನ್ಸ್ ಎಂಬಿಇ ರ ಮಾರ್ಗದರ್ಶನದಲ್ಲಿ ಕಲಿತಿದ್ದಾರೆ.
ಇದು ಅತ್ಯಂತ ಗೌರವಾನ್ವಿತ ಕಲಾ ಪ್ರಕಾರವಾಗಿದೆ, ಇದನ್ನು ಬ್ರಿಟಿಷ್ ರಾಜಮನೆತನಕ್ಕೆ ಕೇಕ್ಗಳನ್ನು ವಿನ್ಯಾಸಗೊಳಿಸಲು ಬಳಸಲಾಗುತ್ತದೆ. ರಾಯಲ್ ಐಸಿಂಗ್ ರುಚಿ ಕೂಡ ಅಷ್ಟೇ ಸೊಗಸಾಗಿರುತ್ತದೆ. ಇದು ಸಾಂಪ್ರದಾಯಿಕವಾಗಿ ಮೊಟ್ಟೆ ಆಧಾರಿತ ಖಾದ್ಯವಾಗಿದೆ. ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ನಿಂದ ಮನ್ನಣೆಯನ್ನು ಪಡೆದ ತನ್ನ ಇತ್ತೀಚಿನ ಸಾಧನೆಯಲ್ಲಿ, ಪ್ರಾಚಿ ಅದ್ಭುತವಾದ 4 ಅಡಿ 6 ಇಂಚು ಎತ್ತರದ ಮಿಲನ್ ಕ್ಯಾಥೆಡ್ರಲ್ನ ಖಾದ್ಯ ಪ್ರತಿಕೃತಿಯನ್ನು ರಚಿಸಿದ್ದಾರೆ.
ವಿಕ್ಟೋರಿಯನ್ ಮತ್ತು ಯುರೋಪಿಯನ್ ವಾಸ್ತುಶೈಲಿಯ ಬಗ್ಗೆ ಪ್ರಾಚಿಯ ಆಕರ್ಷಣೆಯು ಅವರು ಮಾಡುವ ಕಾರ್ಯದಲ್ಲಿ ಸಾಕಾರಗೊಂಡಿದೆ. ಸಾಂಪ್ರದಾಯಿಕ ಸ್ಮಾರಕಗಳನ್ನು ಅತ್ಯಂತ ನಿಖರತೆಯೊಂದಿಗೆ ಮರುಸೃಷ್ಟಿಸುತ್ತಾರೆ.