ನಟಿ ಸಮಂತಾ ರುತ್ ಪ್ರಭು ತಮ್ಮ ಹೊಸ ಚಿತ್ರದ ಬಿಡುಗಡೆ ಹಿನ್ನೆಲೆಯಲ್ಲಿ ತಮಿಳುನಾಡಿನ ಪಳನಿ ಮುರುಗನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಅಚ್ಚ ಬಿಳಿಯ ಕಾಟನ್ ಡ್ರೆಸ್ನಲ್ಲಿ ಕಾಣಿಸಿಕೊಂಡ ಸಮಂತಾ ಮೇಕಪ್ ಇಲ್ಲದೇ ಬಂದಿದ್ದು ಮತ್ತೊಂದು ವಿಶೇಷ.
ಬರಿಗಾಲಲ್ಲಿಯೇ ಸುಮಾರು 600 ಮೆಟ್ಟಿಲುಗಳನ್ನು ಹತ್ತಿ ಸಮಂತಾ ಪುರಾತನ ಪಳನಿ ಮುರುಗನ್ ದೇವಾಲಯವನ್ನು ತಲುಪಿದ್ದಾರೆ. ಅಲ್ಲಿ ʼಶಾಕುಂತಲಂʼ ಚಿತ್ರ ತಂಡದೊಂದಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಸಮಂತಾ ದೇವಸ್ಥಾನ ಭೇಟಿಯ ಹಲವಾರು ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ದೇವಾಲಯದಲ್ಲಿನ ದೀರ್ಘಕಾಲದ ಸಂಪ್ರದಾಯದಂತೆ ಸಮಂತಾ ಕರ್ಪೂರವನ್ನು ಬೆಳಗಿಸಿದ್ದಾರೆ. ಜಾನು ಚಿತ್ರದ ನಿರ್ದೇಶಕ ಸಿ. ಪ್ರೇಮ್ ಕುಮಾರ್ ಕೂಡ ಸಮಂತಾ ಜೊತೆಯಲ್ಲಿದ್ದರು. ದೇವಾಲಯ ಭೇಟಿ ವೇಳೆ ಸಮಂತಾ ಮಾಸ್ಕ್ ಧರಿಸಿಯೇ ಇದ್ದರು.
ಸಮಂತಾ ಮೇಯೋಸಿಟಿಸ್ ಎಂಬ ಕಾಯಿಲೆಗೆ ತುತ್ತಾಗಿದ್ದು, ಸದ್ಯ ಇಮ್ಯುನೊಗ್ಲಾಬ್ಯುಲಿನ್ ಥೆರಪಿ (ಐವಿಐಜಿ) ಎಂಬ ಚಿಕಿತ್ಸೆಯಲ್ಲಿದ್ದಾರೆ. ಈಗಾಗ್ಲೇ ಸಮಂತಾ ನಟನೆಯ ಎರಡನೇ OTT ಪ್ರಾಜೆಕ್ಟ್ ಚಿತ್ರೀಕರಣ ಹಂತದಲ್ಲಿದೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಇದು ಪ್ರಸಾರವಾಗಲಿದೆ. ಸಮಂತಾ ನಟನೆಯ ಶಾಕುಂತಲಂ ಚಿತ್ರ ಕೂಡ ವ್ಯಾಲಂಟೈನ್ ದಿನವಾದ ಇಂದು ಬಿಡುಗಡೆಯಾಗಿದೆ. ಮೊದಲು ಫೆಬ್ರವರಿ 17 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ದೇವ್ ಮೋಹನ್ ಮತ್ತು ಪ್ರಕಾಶ್ ರಾಜ್ ಕೂಡ ಚಿತ್ರದಲ್ಲಿ ನಟಿಸಿದ್ದಾರೆ.