ರೇಷ್ಮೆ ಬಟ್ಟೆಗಳು ನಮ್ಮ ಪ್ರತಿಷ್ಠೆಯ ಪ್ರತೀಕ. ರೇಷ್ಮೆ ಸೀರೆ ಅಥವಾ ಇತರ ಉಡುಗೆಗಳ ಫ್ಯಾಷನ್ ಹಿಂದಿನಿಂದಲೂ ಇದೆ. ಇದು ಔಟ್ ಆಫ್ ಫ್ಯಾಷನ್ ಆಗುವ ಮಾತೇ ಇಲ್ಲ. ಹಾಗಾಗಿಯೇ ರೇಷ್ಮೆ ಬಟ್ಟೆಗಳು ಕೂಡ ದುಬಾರಿ. ರೇಷ್ಮೆ ಸೀರೆ ಅಥವಾ ಇತರ ಉಡುಗೆಗಳನ್ನು ಮ್ಯಾನೇಜ್ ಮಾಡುವುದು ಕೂಡ ಸುಲಭವಲ್ಲ. ಅವುಗಳನ್ನು ಡ್ರೈ ಕ್ಲೀನ್ ಮಾಡಬೇಕು. ಮನೆಯಲ್ಲೇ ತೊಳೆದರೆ ಬಣ್ಣ ಮಾಸುತ್ತದೆ ಅನ್ನೋ ಆತಂಕ ಇದ್ದೇ ಇರುತ್ತದೆ. ಆದರೆ ಬಣ್ಣ ಮಾಸದಂತೆ ರೇಷ್ಮೆ ಸೀರೆಗಳನ್ನು ನೀವು ಮನೆಯಲ್ಲೇ ತೊಳೆಯಬಹುದು. ಆದರೆ ಕೆಲವೊಂದು ಸಂಗತಿಗಳನ್ನು ಗಮನದಲ್ಲಿರಿಸಿಕೊಂಡು ಅವುಗಳನ್ನು ಪಾಲಿಸಿದರೆ ಸೀರೆ ಬಣ್ಣ ಮಾಸುವುದಿಲ್ಲ, ಹಾಳಾಗುವುದಿಲ್ಲ. ನೀವು ಡ್ರೈ ಕ್ಲೀನ್‌ಗೆ ಹಣ ಖರ್ಚು ಮಾಡದೇ ಮನೆಯಲ್ಲೇ ಸೀರೆಗಳನ್ನು ವಾಶ್ ಮಾಡಬಹುದು.
ರೇಷ್ಮೆ ಸೀರೆಗಳನ್ನು ಸಾಮಾನ್ಯ ಸಾಬೂನಿನಿಂದ ತೊಳೆಯಬೇಡಿ, ಇದು ಸೀರೆಯನ್ನು ಹಾಳು ಮಾಡುತ್ತದೆ. ಆದ್ದರಿಂದಲೇ ರೇಷ್ಮೆ ಸೀರೆಯನ್ನು ಒಮ್ಮೆ ಉಟ್ಟ ನಂತರ ಒಗೆಯಬಾರದು. ಬದಲಿಗೆ 4-5 ಬಾರಿ ಧರಿಸಿದ ನಂತರವೇ ತೊಳೆಯಿರಿ. ವಾಶ್ ಮಾಡುವ ಮುನ್ನ ಸೀರೆಯ ಮೇಲಿನ ಲೇಬಲ್ ಅನ್ನು ಓದಿಕೊಳ್ಳಿ.
ಹಂತ 1 : ನೀವು ರೇಷ್ಮೆ ಸೀರೆಯನ್ನು ಮನೆಯಲ್ಲೇ ತೊಳೆಯುವಾಗ ತಣ್ಣೀರು ಬಳಸಿ. ಮೊದಲು ಬಕೆಟ್‌ನಲ್ಲಿ ನೀರು ತುಂಬಿಸಿ, ಅದರಲ್ಲಿ ರೇಷ್ಮೆ ಸೀರೆಯನ್ನು ನೆನೆಯಲು ಬಿಡಿ. 2 ಗಂಟೆಗಳ ನಂತರ ಸೀರೆಯನ್ನು ತೊಳೆಯಿರಿ.
ಹಂತ-2: ನೀರು ತುಂಬಿದ ಮತ್ತೊಂದು ಬಕೆಟ್‌ನಲ್ಲಿ ಎರಡು ಚಮಚ ವಿನೆಗರ್ ಮಿಶ್ರಣ ಮಾಡಿ. ನಂತರ ಸೀರೆಯನ್ನು 15 ನಿಮಿಷಗಳ ಕಾಲ ನೆನೆಯಲು ಬಿಡಿ.
ಹಂತ-3: ಬಕೆಟ್‌ನಿಂದ ರೇಷ್ಮೆ ಸೀರೆಯನ್ನು ತೆಗೆದ ನಂತರ ಸೀರೆಯನ್ನು ತೊಳೆಯಲು ಸೌಮ್ಯವಾದ ಸೋಪ್ ಬಳಸಿ. ಬ್ಲೀಚ್ ಮತ್ತು ಎಂಟಿ ಕಲರ್ ಫೇಡಿಂಗ್ ಅನ್ನು ಸಹ ಬಳಸಬಹುದು. ಹೀಗೆ ಮಾಡುವುದರಿಂದ ಸೀರೆಯ ಬಣ್ಣ ಮಾಸುವುದಿಲ್ಲ.
ಹಂತ-4: ಡಿಟರ್ಜೆಂಟ್ ನೀರಿನಿಂದ ರೇಷ್ಮೆ ಸೀರೆಯನ್ನು ತೆಗೆದು ಚೆನ್ನಾಗಿ ತಣ್ಣಿರಿನಲ್ಲಿ ತೊಳೆಯಿರಿ. ಬಕೆಟ್‌ನಲ್ಲಿ ನೀರು ತುಂಬಿಕೊಂಡು ಅದರಲ್ಲಿ ಸೀರೆಯನ್ನು ಅದ್ದಿ ತೆಗೆದರೆ ಸಾಕು. ಯಾವುದೇ ಕಾರಣಕ್ಕೂ ಬ್ರಷ್ ಬಳಸಬೇಡಿ. ಬಲವಾದ ಸೂರ್ಯನ ಬೆಳಕಿನಲ್ಲಿ ರೇಷ್ಮೆ ಸೀರೆಯನ್ನು ಎಂದಿಗೂ ಒಣಗಿಸಬೇಡಿ. ರೇಷ್ಮೆ ಸೀರೆಯನ್ನು ಯಾವಾಗಲೂ ನೆರಳಿನಲ್ಲಿ ಒಣಗಿಸಿ. ಬಿಸಿಲಿನಲ್ಲಿ ಒಣಗಿಸಿದರೆ ಬಣ್ಣ ಮಸುಕಾಗುತ್ತದೆ.