ಬೀದಿ ಬದಿಯ ಕಾಟನ್ ಕ್ಯಾಂಡಿ ವ್ಯಾಪಾರಿಗೆ ರಸ್ತೆಯಲ್ಲಿದ್ದಾಗಲೇ ಒತ್ತರಿಸಿ ಬಂದ ದುಃಖದ ವಿಡಿಯೋ ನೆಟ್ಟಿಗರ ಕಣ್ಣನ್ನು ಒದ್ದೆ ಮಾಡುತ್ತಿದೆ.
ಛಾಯಾಗ್ರಾಹಕ ಮತ್ತು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಸಿಫ್ ಖಾನ್ ಇನ್ಸ್ಟಾಗ್ರಾಮ್ನಲ್ಲಿ ಹೃದಯ ಹಿಂಡುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಕಾಟನ್ ಕ್ಯಾಂಡಿ ಮಿಠಾಯಿ ಮಾರುತ್ತಿದ್ದ ವ್ಯಕ್ತಿ ರಸ್ತೆಯ ಮಧ್ಯದಲ್ಲಿ ಏಕಾಏಕಿ ದುಃಖಭರಿತರಾಗುವುದು ಕಾಣಿಸುತ್ತದೆ. ಮೇ ತಿಂಗಳಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ, ಅದು 6 ಮಿಲಿಯನ್ ವೀಕ್ಷಣೆಯಾಗಿದೆ. ಅನಾಮಧೇಯ ವ್ಯಕ್ತಿಯೊಬ್ಬ ರಸ್ತೆಯಲ್ಲಿ ನಿಂತು ಕಣ್ಣೀರು ಒರೆಸುತ್ತಿರುವ ದೃಶ್ಯ ವಿಡಿಯೋದಲ್ಲಿದೆ.
ಜೀವನೋಪಾಯಕ್ಕಾಗಿ ಕಾಟನ್ ಕ್ಯಾಂಡಿ ಮಾರುತ್ತಿದ್ದನಂತೆ ಕಾಣಿಸುತ್ತದೆ. ಅವನ ಕಣ್ಣೀರಿಗೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ, ಆದರೆ ವಿಡಿಯೊ ಆತನ ಪರಿಸ್ಥಿತಿಯನ್ನು ಹೇಳುವಂತಿದೆ.