ಕಡಲೆಕಾಯಿ ಬಡವರ ಬಾದಾಮಿ ಎಂದೇ ಪ್ರಸಿದ್ಧ. ಕಡಲೆಕಾಯಿ ಬೀಜದಲ್ಲಿ ಹೆಚ್ಚಿನ ಪ್ರಮಾಣದ ಫೈಬರ್, ವಿಟಮಿನ್, ಮಿನರಲ್ಸ್, ಆಂಟಿ ಆಕ್ಸಿಡೆಂಟ್ ಅಂಶಗಳು ಇರುತ್ತವೆ. ಬೇಯಿಸಿದ ಕಡಲೆ ಕಾಯಿ ಬೀಜ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಇದನ್ನು ಸೇವಿಸುವುದರಿಂದ ಮೂಳೆಗಳು ಗಟ್ಟಿಯಾಗುತ್ತವೆ. ಹೃದಯದ ಸಮಸ್ಯೆಗಳನ್ನು ದೂರ ಮಾಡುತ್ತದೆ. ನಾವು ಸೇವಿಸಿದ ಆಹಾರವನ್ನು ಸುಲಭವಾಗಿ ಜೀರ್ಣ ಮಾಡುತ್ತದೆ ಹಾಗೂ ಮಲಬದ್ಧತೆ ಸಮಸ್ಯೆಯನ್ನು ದೂರ ಮಾಡುತ್ತದೆ.
ಕಡಲೆಯಲ್ಲಿ ಪಾಲಿಫೆನಾಲ್ ಆಂಟಿಯಾಕ್ಸಿಡಂಟ್ ಹಾಗೂ ಪಿ-ಕೌಮ್ಯಾರಿಕ್ ಆಸಿಡ್ ಇದ್ದು, ಇದು ನಮ್ಮ ದೇಹಕ್ಕೆ ಹೆಚ್ಚು ಅವಶ್ಯಕವಾಗಿದೆ. ಇದು ಕ್ಯಾನ್ಸರ್ ನಿಂದ ದೂರವಿರಿಸುತ್ತದೆ. ಮೆದುಳಿನ ರಕ್ತ ಚಲನೆಯನ್ನು ಹೆಚ್ಚಿಸುತ್ತದೆ.
ಕೊಬ್ಬನ್ನು ಕರಗಿಸಿ ಕಿಡ್ನಿಯಲ್ಲಿ ಕಲ್ಲು ಆಗುವುದನ್ನು ತಡೆಯುತ್ತದೆ. ಬೇಯಿಸಿದ ಕಡಲೆಕಾಯಿಯಲ್ಲಿ ನಾರಿನ ಅಂಶ ಹೆಚ್ಚು ಇರುತ್ತದೆ. ಹಾಗಾಗಿ ಇದನ್ನು ಸೇವಿಸುವುದರಿಂದ ಪೈಲ್ಸ್ ಸಮಸ್ಯೆಯಿಂದ ದೂರ ಇರಬಹುದು. ಹಿತ ಮಿತವಾಗಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ.