alex Certify ಬಟ್ಟೆ ಹಾಕಲು ಸೋಮಾರಿತನ, ಮೈತುಂಬಾ ಹಚ್ಚೆ ಹಾಕಿಸಿಕೊಂಡುಬಿಟ್ಲು ಮಹಿಳೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಟ್ಟೆ ಹಾಕಲು ಸೋಮಾರಿತನ, ಮೈತುಂಬಾ ಹಚ್ಚೆ ಹಾಕಿಸಿಕೊಂಡುಬಿಟ್ಲು ಮಹಿಳೆ….!

ಇತ್ತೀಚಿನ ದಿನಗಳಲ್ಲಿ ಟ್ಯಾಟೂ ಕ್ರೇಝ್‌ ಹೆಚ್ಚುತ್ತಲೇ ಇದೆ. ಸೆಲೆಬ್ರಿಟಿಗಳನ್ನು ನೋಡಿ ಜನಸಾಮಾನ್ಯರು ಕೂಡ ಬಗೆ ಬಗೆಯ ಹಚ್ಚೆಗಳನ್ನು ಹಾಕಿಸಿಕೊಳ್ತಾರೆ. ಇಲ್ಲೊಬ್ಬ ಮಹಿಳೆ ಟ್ಯಾಟೂಗಳಿಗಾಗಿ ಲಕ್ಷಗಟ್ಟಲೆ ಹಣ ಖರ್ಚು ಮಾಡಿದ್ದಾಳೆ.

ಟ್ಯಾಟೂ ಮಾಡೆಲ್‌ ಎಂದೇ ಗುರುತಿಸಿಕೊಂಡಿರೋ ಕೆರ್ಸ್ಟಿನ್‌ ಟ್ರಿಸ್ಟಾನ್‌ ಎಂಬ ಮಹಿಳೆಯ ಫೋಟೋಗಳು ಈಗ ವೈರಲ್‌ ಆಗಿವೆ.

ಕೆರ್ಸ್ಟಿನ್ ಟ್ರಿಸ್ಟಾನ್ ಟ್ಯಾಟೂ ಹಾಕಿಸಿಕೊಳ್ಳಲು ಇದುವರೆಗೆ ಸುಮಾರು 24 ಲಕ್ಷ ರೂಪಾಯಿಗೂ ಹೆಚ್ಚು ಹಣವನ್ನು ಖರ್ಚು ಮಾಡಿದ್ದಾಳೆ. ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಬಗೆಬಗೆಯ ಫೋಟೋಗಳನ್ನು ಈಕೆ ಅಪ್ಲೋಡ್‌ ಮಾಡಿದ್ದಾಳೆ.

ಕೆರ್ಸ್ಟಿನ್‌ಗೆ ಈಗ 50 ವರ್ಷ. ತಾನು ಯಂಗ್‌ ಆಗಿದ್ದಾಗಿನಿಂದ ಹಿಡಿದು ಈವರೆಗೆ ತೆಗೆದ ಫೋಟೋಗಳನ್ನು ಆಕೆ ಜಾಲತಾಣದಲ್ಲಿ ಹಾಕಿದ್ದಾಳೆ.

ಒಟ್ಟಿಗೆ ಮೂರು ಚಿತ್ರಗಳನ್ನು ಈಕೆ ಹಂಚಿಕೊಂಡಿದ್ದು, 1992, 2014 ಮತ್ತು 2022 ರಲ್ಲಿ ಕೆರ್ಸ್ಟಿನ್ ಹೇಗಿದ್ದಾಳೆ ಅನ್ನೋದನ್ನು ನೋಡಬಹುದು.  ಈ ಫೋಟೋಗಳಲ್ಲಿ ಕೆರ್ಸ್ಟಿನ್‌ಳ ಬದಲಾದ ರೂಪ ನೋಡಿ ನೆಟ್ಟಿಗರು ದಂಗಾಗಿ ಹೋಗಿದ್ದಾರೆ.

ಆರು ವರ್ಷಗಳ ಹಿಂದೆ @tattoo_butterfly_flower ಎಂಬ ಹೆಸರಿನೊಂದಿಗೆ Instagram ನಲ್ಲಿ ಈಕೆ ಖಾತೆ ಆರಂಭಿಸಿದ್ದಳು. ಸದ್ಯ ಈಕೆಗೆ ಸುಮಾರು ಎರಡು ಲಕ್ಷ ಫಾಲೋವರ್ಸ್ ಇದ್ದಾರೆ. ಕ್ರಿಸ್ಟಿನ್ ಈ ಖಾತೆಯಲ್ಲಿ ತನ್ನ ಹಚ್ಚೆ ಚಿತ್ರಗಳನ್ನು ಹಂಚಿಕೊಂಡಿದ್ದಾಳೆ.

50 ವರ್ಷ ಪ್ರಾಯದಲ್ಲೂ ಈಕೆ ಸಾಕಷ್ಟು ಹಾಟ್‌ & ಸೆಕ್ಸಿಯಾಗಿ ಕಾಣಿಸಿಕೊಂಡಿದ್ದಾಳೆ. ಜರ್ಮನಿ ಮೂಲದ ಈ ಟ್ಯಾಟೂ ಮಾಡೆಲ್ 5 ವರ್ಷಗಳ ಹಿಂದೆ ತನ್ನ ದೇಹದ ಮೇಲೆ ಮೊದಲ ಟ್ಯಾಟೂವನ್ನು ಹಾಕಿಸಿಕೊಂಡಿದ್ದಳು. ಅದಾದ ಮೇಲೆ ಆಕೆಯ ಟ್ಯಾಟೂ ಹುಚ್ಚು ಹೆಚ್ಚಾಗುತ್ತಲೇ ಹೋಯಿತು. ಈಗ ಇಡೀ ದೇಹದ ತುಂಬೆಲ್ಲಾ ಟ್ಯಾಟೂ ಹಾಕಿಸಿಕೊಂಡಿದ್ದಾಳೆ. ಬಣ್ಣಬಣ್ಣದ ಹೂವು, ಹಕ್ಕಿ, ಚಿಟ್ಟೆಯ ವಿನ್ಯಾಸಗಳನ್ನು ಮಾಡಿಸಿಕೊಂಡಿದ್ದಾಳೆ.

ಕೆರ್ಸ್ಟಿನ್ ಬಟ್ಟೆಗಳನ್ನು ಧರಿಸುವುದು ಅಂದ್ರೆ ಆಲಸ್ಯವಂತೆ. ಹಾಗಾಗಿಯೇ ಬರೀ ಟೂ ಪೀಸ್‌ನಲ್ಲಿರಲು ಈಕೆ ಇಷ್ಟಪಡ್ತಾಳೆ. ಇದೇ ಕಾರಣಕ್ಕೆ ಇಡೀ ದೇಹದ ತುಂಬ ಹಚ್ಚೆ ಹಾಕಿಸಿಕೊಂಡಿದ್ದಾಳಂತೆ. ಟ್ಯಾಟೂ ಮಾಡೆಲಿಂಗ್‌ನಿಂದಾಗಿಯೇ ಕೆರ್ಸ್ಟಿನ್‌ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾಳೆ.

ಇವಳ ಮೈಮೇಲೆ ಈಗ ನೂರಾರು ಟ್ಯಾಟೂಗಳಿವೆ. ಹಚ್ಚೆ ತನಗೆ ಶಕ್ತಿ ನೀಡುತ್ತದೆ ಎನ್ನುತ್ತಾಳೆ ಈ ಮಹಿಳೆ. ಇನ್ನೂ ಟ್ಯಾಟೂ ಹಾಕಿಸಿಕೊಳ್ಳಬೇಕೆಂಬ ಆಸೆ ಅವಳಿಗೆ ಇದೆಯಂತೆ, ಆದ್ರೆ ದೇಹದಲ್ಲಿ ಜಾಗವೇ ಇಲ್ಲದಷ್ಟು ಹಚ್ಚೆಗಳು ಈಗಾಗ್ಲೇ ತುಂಬಿಕೊಂಡಿವೆ.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...