ಮಹಿಳೆಯರ ಸೌಂದರ್ಯವನ್ನು ಲಿಪ್ ಸ್ಟಿಕ್ ಹೆಚ್ಚಿಸುತ್ತದೆ. ಆದ್ರೆ ತುಟಿಗೆ ಹಚ್ಚುವ ಈ ಬಣ್ಣ ಅನೇಕ ಬಾರಿ ಬಟ್ಟೆ ಮೇಲೆ ಬೀಳುತ್ತದೆ. ಇದ್ರ ಕಲೆಯನ್ನು ತೆಗೆಯೋದು ಕಷ್ಟ. ಲಿಪ್ ಸ್ಟಿಕ್ ಕಲೆಯನ್ನು ಮನೆಯಲ್ಲಿ ಸುಲಭವಾಗಿ ತೆಗೆಯುವ ಟಿಪ್ಸ್ ಇಲ್ಲಿದೆ.
ಬಟ್ಟೆ ಮೇಲೆ ಬಿದ್ದ ಲಿಪ್ಸ್ಟಿಕ್ ಕಲೆಯನ್ನು ಶೇವಿಂಗ್ ಕ್ರೀಮ್ ನಿಂದ ತೆಗೆಯಬಹುದು. ಕಲೆಯಾದ ಜಾಗಕ್ಕೆ ಶೇವಿಂಗ್ ಕ್ರೀಮ್ ನಿಂದ ಸ್ಕ್ರಬ್ ಮಾಡಿ. ಸ್ವಲ್ಪ ಸಮಯ ಹಾಗೆ ಬಿಟ್ಟು ನಂತ್ರ ತೊಳೆದ್ರೆ ಕಲೆ ಹೋಗಿರುತ್ತದೆ.
ಲಿಪ್ಸ್ಟಿಕ್ ಕಲೆ ತಗೆಯಲು ಹೇರ್ ಸ್ಪ್ರೇ ಕೂಡ ಬೆಸ್ಟ್. ಕಲೆಯಾದ ಜಾಗಕ್ಕೆ ಸ್ಪ್ರೇ ಹಾಕಿ 15 ನಿಮಿಷ ಬಿಟ್ಟು ತೊಳೆದ್ರೆ ಕಲೆ ಮಾಯವಾಗಿರುತ್ತದೆ.
ಟೂತ್ ಪೇಸ್ಟ್ ನಿಂದ ಕೂಡ ಲಿಪ್ಸ್ಟಿಕ್ ಕಲೆ ತೆಗೆಯಬಹುದು. ಕಲೆಯಾಗಿರುವ ಜಾಗಕ್ಕೆ ಟೂತ್ ಪೇಸ್ಟ್ ಹಚ್ಚಿ ಸ್ವಲ್ಪ ಸಮಯ ಬಿಟ್ಟು ತೊಳೆದ್ರೆ ಕಲೆ ಇರುವುದಿಲ್ಲ.
ಬಟ್ಟೆ ಮೇಲೆ ಪದಾರ್ಥ ಬಿದ್ದ ತಕ್ಷಣ ತೊಳೆಯಬೇಕು. ಬಟ್ಟೆಯನ್ನು ಮಡಚಿದ್ರೆ ಕಲೆ ಬೇರೆಡೆ ಹರಡುತ್ತದೆ. ಹಾಗೆ ಕಲೆಯಾಗಿ ತುಂಬಾ ದಿನವಾದ್ರೆ ಕಲೆ ತೆಗೆಯುವುದು ಕಷ್ಟ.