ಅಣ್ಣಾ, ಒಂದು ಕಪ್ ಚಹಾ ಎನ್ನುತ್ತಾ ಎಂದು ಸೀರೆಯುಟ್ಟಿದ್ದ ಪುಷ್ಪಕ್ ಸೇನ್ ಎಂಬ ವ್ಯಕ್ತಿ ಕೋಲ್ಕತ್ತಾದ ಸೋವಾಬಜಾರ್‌ನಲ್ಲಿ ರಸ್ತೆಬದಿಯ ಚಹಾ ಮಾರಾಟಗಾರನ ಬಳಿ ಕೇಳಿದ್ದಾರೆ. ಸೀರೆಯನ್ನು ಧರಿಸಿದ ಗಡ್ಡಧಾರಿ ವ್ಯಕ್ತಿಯನ್ನು ನೋಡಿ ಅಂಗಡಿಯವ ಗಾಬರಿಯಾಗಿದ್ದಾನೆ. ಈತ ಚಹಾ ಸೇವಿಸುತ್ತಿರಬೇಕಾದ್ರೆ ಅಲ್ಲಿ ನೆರೆದಿದ್ದವರು ಪಿಸುಪಿಸು ಮಾತನಾಡಲು ಶುರು ಮಾಡಿದ್ದಾರೆ.
ಹೌದು, ಪುಷ್ಪಕ್ ಸೇನ್ ಎಂಬ ವ್ಯಕ್ತಿಯು ಪ್ಯಾಂಟ್, ಶರ್ಟ್ ತೊಡದೆ ಕೇವಲ ಸೀರೆಯನ್ನು ಇಷ್ಟಪಡುತ್ತಾನೆ. ಹಾಗಂತ ಈತ ತೃತೀಯ ಲಿಂಗಿಯಲ್ಲ. ಈತ, ಬಟ್ಟೆಗೆ ಲಿಂಗವಿಲ್ಲ ಎಂದು ಪ್ರತಿಪಾದಿಸುತ್ತಿರುವ ವ್ಯಕ್ತಿಯಾಗಿದ್ದು, ಸೀರೆಯನ್ನುಟ್ಟು ದೇಶದ ಉದ್ದಗಲಕ್ಕೂ ಸಂಚರಿಸುತ್ತಾ, ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
26 ವರ್ಷದ ಸೇನ್, ಸೀರೆ ಧರಿಸಿರುವ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಬಂಗಾಳದ ಕೈಮಗ್ಗ ನೇಯ್ಗೆಯ ಇಂದ ಹಿಡಿದು ಶ್ರೀಮಂತ ಬನಾರಸಿಯ ರೋಮಾಂಚಕ ನೇರಳೆವರೆಗೆ, ಸೇನ್ ಯಾವುದೇ ಶೈಲಿಯ ಸೀರೆಯನ್ನು ಧರಿಸುತ್ತಾರೆ. ಅಷ್ಟೇ ಅಲ್ಲ, ಮಹಿಳೆಯರಂತೆ ಅಲಂಕಾರವನ್ನೂ ಮಾಡುತ್ತಾರೆ.
ಸೇನ್ ಇಟಲಿಗೆ ತೆರಳಿದ್ದಾಗ ಆರು ಸೀರೆಗಳನ್ನು ಒಯ್ದಿದ್ದರಂತೆ. ವಿಶೇಷ ಸಂದರ್ಭಗಳಲ್ಲಿ ಅವುಗಳನ್ನು ಧೋತಿಯಾಗಿ ಧರಿಸಲು ತೀರ್ಮಾನಿಸಿದ್ದರಂತೆ. ಆದರೆ, ಅಲ್ಲಿದ್ದ ಭಾರತೀಯ ಮೂಲದವರು ಯಾರೂ ಕೂಡ ಸೀರೆಯನ್ನು ಧರಿಸದೆ ವಿದೇಶಿ ಉಡುಪುಗಳನ್ನು ಧರಿಸಿದ್ದು ಸೇನ್ ಗೆ ಕೋಪವನ್ನುಂಟು ಮಾಡಿತ್ತು.
ಬಟ್ಟೆಯ ತುಂಡು ಕೇವಲ ಉಡುಪನ್ನು ಮೀರಿದೆ ಎಂದು ಹೇಳುತ್ತಾ, ಕಲಾತ್ಮಕತೆ ಮತ್ತು ಕರಕುಶಲತೆಯು ನಮ್ಮ ದೇಶದ ಪರಂಪರೆ, ಹೆಮ್ಮೆ ಮತ್ತು ಕಿರೀಟದ ಆಭರಣಕ್ಕಿಂತ ಕಡಿಮೆಯಿಲ್ಲ ಎಂದು ಸೇನ್ ತಿಳಿಸಿದ್ದಾರೆ. ಆದ್ದರಿಂದ, ಪ್ರತಿ ಸುಂದರವಾದ ಸೃಷ್ಟಿಯ ಕಥೆಯನ್ನು ಹೇಳಲು, ಸಾಂಪ್ರದಾಯಿಕವಾಗಿ ಧರಿಸಬೇಕಾದ ಸೀರೆಯನ್ನು ಧರಿಸುವುದು ಏಕೈಕ ಮಾರ್ಗವಾಗಿದೆ ಎಂಬುದು ಅವರ ಅಂಬೋಣ.
ಪುರುಷ ಸೀರೆಯನ್ನುಟ್ಟಾಗ ನೋಡುವ ದೃಷ್ಟಿಕೋನ ಬೇರೆಯೇ ಇರುತ್ತದೆ. ವಿದೇಶದಲ್ಲಾದ್ರೆ ಕುತೂಹಲದಿಂದ ನೋಡುತ್ತಾರೆ. ಆದರೆ, ಭಾರತದಲ್ಲಿ ಏನೋ ಬೇರೆ ಥರನಾ ನೋಡುತ್ತಾರೆ. ಹುಡುಗನೋ, ಹುಡುಗಿಯೋ, ಅಥವಾ ಬೇರೆಯಾ ಅಂತೆಲ್ಲಾ ಕೇಳುತ್ತಾರೆ. ಇದೆಲ್ಲಾ ಕಿರಿಕಿರಿ ಆಗೋದು ಸಹಜ ಅನ್ನೋದು ಅವರ ಮಾತು.
ತಾನು ಸ್ತ್ರೀಲಿಂಗವನ್ನು ಪ್ರೀತಿಸುವ ಸಿಸ್-ಲಿಂಗದ ಪುರುಷ ಎಂದು ಗುರುತಿಸಿಕೊಳ್ಳುವುದಾಗಿ ಸೇನ್ ಉತ್ತರಿಸುತ್ತಾರೆ. ತನ್ನ ಪುರುಷತ್ವ ಅಥವಾ ಅಸ್ತಿತ್ವದ ಪ್ರಜ್ಞೆಯು ಬಟ್ಟೆ ಅಥವಾ ಮೇಕ್ಅಪ್‌ನಿಂದ ಛಿದ್ರವಾಗುವಷ್ಟು ದುರ್ಬಲವಾಗಿಲ್ಲ ಎಂದು ಹೇಳಿದ್ದಾರೆ.
ಬಟ್ಟೆಗೆ ಲಿಂಗವಿಲ್ಲ. ಸೀರೆಗಳಿಗೆ ಲಿಂಗವಿಲ್ಲ. ಇಂಥದ್ದನ್ನು ಸಾಧ್ಯವಾದಷ್ಟು ಬೇಗ ತೆಗೆದುಹಾಕಬೇಕಾಗಿದೆ ಎಂಬುದಾಗಿ ಅವರು ತಿಳಿಸಿದ್ದಾರೆ. ಗಂಗಾನದಿಯ ತಟದಲ್ಲಿ ಕುಳಿತಿದ್ದಾಗ ವೃದ್ಧ ಮಹಿಳೆಯೊಬ್ಬರು ತನ್ನ ಜೊತೆ ಮಾತನಾಡಲು ಮುಂದಾದ್ರು. ನಿಜವಾಗಿಯೂ ಚೆನ್ನಾಗಿ ಕಾಣುತ್ತಿದೆ. ನೀವೇ ಅದನ್ನು ಧರಿಸಿದ್ದೀರಾ? ಎಂದು ಸಂತಸದಿಂದ ಆಕೆ ಕೇಳಿದರಂತೆ. ಹೀಗೆ ಸೀರೆಗೆ ಯಾವುದೇ ಲಿಂಗವಿಲ್ಲ. ಪುರುಷರು ಕೂಡ ಸೀರೆಯನ್ನುಡಬಹುದು ಎಂಬ ಸಂದೇಶವನ್ನು ಹರಡುತ್ತಿದ್ದಾರೆ ಪುಷ್ಪಕ್ ಸೇನ್.