ದೈನಂದಿನ ಜೀವನದಲ್ಲಿ ಬಟ್ಟೆ ಒಗೆಯುವುದು ಒಂದು ಪ್ರಮುಖ ಕೆಲಸ. ಮೊದಲು ಈ ಕೆಲಸವನ್ನು ಬಕೆಟ್ ಅಥವಾ ಟಬ್ ಸಹಾಯದಿಂದ ಮಾಡಲಾಗುತ್ತಿತ್ತು, ಆದರೆ ಕಳೆದ ಕೆಲವು ದಶಕಗಳಿಂದೀಚೆಗೆ ಬಟ್ಟೆ ತೊಳೆಯುವ ಯಂತ್ರದ ಬಳಕೆ ಬಹಳಷ್ಟು ಹೆಚ್ಚಾಗಿದೆ.
ಕಡಿಮೆ ಶ್ರಮದಿಂದ ಹೆಚ್ಚು ಕೆಲಸ ಮಾಡುತ್ತದೆ ಈ ವಾಷಿಂಗ್ ಮಷಿನ್. ಆದರೆ ಅನೇಕ ಬಾರಿ ಮಷಿನ್‌ನಲ್ಲಿ ಬಟ್ಟೆಗಳು ಸರಿಯಾಗಿ ಸ್ವಚ್ಛವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಪೇಯ್ನ್ ಕಿಲ್ಲರ್ ಅನ್ನು ನೀವು ಬಳಸಬಹುದು.
ನೋವನ್ನು ಹೋಗಲಾಡಿಸಲು ನಾವು ಸಾಮಾನ್ಯವಾಗಿ ಆಸ್ಪಿರಿನ್ ಅನ್ನು ಬಳಸುತ್ತೇವೆ, ಈ ನೋವು ನಿವಾರಕದಿಂದ ಅನೇಕ ಜನರು ಪರಿಹಾರ ಪಡೆಯುತ್ತಾರೆ. ಆದರೆ ಇದು ಬಟ್ಟೆಯ ಡಾಕ್ಟರ್ ಎಂದರೂ ತಪ್ಪಾಗಲಾರದು. ಅಸ್ಪಿರಿನ್ ಮಾತ್ರೆಗಳನ್ನು ಬಳಸಿ ಬಟ್ಟೆಗಳಿಂದ ಕಲೆಗಳನ್ನು ತೆಗೆಯಬಹುದು. ಆಸ್ಪಿರಿನ್ ಶುದ್ಧೀಕರಣ ಪ್ರಕ್ರಿಯೆಗಳೊಂದಿಗೆ ನೇರ ಸಂಪರ್ಕವನ್ನು ಹೊಂದಿದೆ. ಬಟ್ಟೆ ಒಗೆಯುವಾಗ ಕೆಲವು ಆಸ್ಪಿರಿನ್ ಮಾತ್ರೆಗಳನ್ನು ವಾಷಿಂಗ್ ಮಷಿನ್ ನಲ್ಲಿ ಹಾಕಿ.
ಅದನ್ನು ಪುಡಿಮಾಡಿ ನೀರಿನಲ್ಲಿ ಬೆರೆಸಿದರೆ ಅದು ಸುಲಭವಾಗಿ ಕರಗುತ್ತದೆ ಮತ್ತು ಉತ್ತಮ ಪರಿಣಾಮವನ್ನು ತೋರಿಸುತ್ತದೆ. ಬಟ್ಟೆ ಕೂಡ ಹೊಸದರಂತೆ ಹೊಳೆಯುತ್ತದೆ. ಆಸ್ಪಿರಿನ್ ಮಾತ್ರೆಗಳನ್ನು ನೀರಿನಲ್ಲಿ ಕರಗಿಸಿ ಅದನ್ನು ನೇರವಾಗಿ ವಾಷಿಂಗ್ ಮಷಿನ್‌ಗೆ ಹಾಕಬಹುದು. ವಾಷಿಂಗ್ ಮಷಿನ್ ಬಳಸದೇ ಇರುವವರು ಕೂಡ ಕಲೆಗಳನ್ನು ಹೊಡೆದೋಡಿಸಲು ಆಸ್ಪಿರಿನ್ ಬಳಕೆ ಮಾಡಬಹುದು. ಬಟ್ಟೆಗಳನ್ನು ನೆನೆಸುವ ಬಕೆಟ್‌ನಲ್ಲಿ ಮಾತ್ರೆಗಳನ್ನು ಬೆರೆಸಿ ಜೊತೆಗೆ ಡಿಟರ್ಜೆಂಟ್ ಕೂಡ ಸೇರಿಸಿ ತೊಳೆಯಬಹುದು.