ಬಣಾಣಿಗಳಲ್ಲಿ ಅನೇಕ ಪೋಷಕಾಂಶಗಳು ಕಂಡು ಬರುತ್ತವೆ. ಬಟಾಣಿ, ಪ್ರೋಟೀನ್, ಫೈಬರ್ ಮತ್ತು ನಾರಿನ ಮೂಲವಾಗಿದೆ.
ಆದರೆ ಇದನ್ನು ಎಲ್ಲರೂ ಸೇವನೆ ಮಾಡಬಾರದು. ಹಾಗಾದ್ರೆ ಬಟಾಣಿಯನ್ನು ಯಾರೆಲ್ಲಾಸೇವಿಸಬಹುದು? ಯಾರು ಸೇವಿಸಬಾರದು ಎಂಬುದನ್ನು ತಿಳಿದುಕೊಳ್ಳಿ.
*ತುಂಬಾ ಆಯಾಸಗೊಂಡವರು ಬಟಾಣಿಯನ್ನು ಸೇವಿಸಬಹುದು. ಇದರಲ್ಲಿ ಪ್ರೋಟೀನ್ ಅಧಿಕವಾಗಿರುವುದರಿಂದ ದೇಹಕ್ಕೆ ಶಕ್ತಿ ನೀಡುತ್ತದೆ. ಇದರಿಂದ ಆಯಾಸ ನಿವಾರಣೆಯಾಗುತ್ತದೆ.
*ಬಟಾಣಿ ಮಧುಮೇಹಿಗಳಿಗೆ ತುಂಬಾ ಒಳ್ಳೆಯದು. ಇದರಲ್ಲಿರುವ ಪ್ರೋಟೀನ್ ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ.
*ಮೂಳೆ ಮುರಿತಕ್ಕೊಳಗಾದವರು ಬಟಾಣಿ ಸೇವಿಸಿದರೆ ಅದರಲ್ಲಿರುವ ವಿಟಮಿನ್ ಕೆ ಮೂಳೆಗಳ ಸಮಸ್ಯೆಯನ್ನು ನಿವಾರಿಸುತ್ತದೆ.
*ಬಟಾಣಿ ಕ್ಯಾನ್ಸರ್ ನಿಂದ ರಕ್ಷಣೆ ನೀಡುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.
ಆದರೆ ವಾಯು ಸಮಸ್ಯೆ ಇರುವವರು ಬಟಾಣಿ ಸೇವನೆಯನ್ನು ಕಡಿಮೆ ಮಾಡಿ. ಹಾಗೇ ಮಲಬದ್ಧತೆ ಸಮಸ್ಯೆ ಇರುವವರು, ಹೊಟ್ಟೆಯ ಸಮಸ್ಯೆ ಇರುವವರು ಬಟಾಣಿ ಸೇವಿಸದಿರುವುದೇ ಉತ್ತಮ ಎನ್ನಲಾಗಿದೆ.