ಚಪಾತಿ, ಅನ್ನದ ಜತೆ ಏನಾದರೂ ಸೈಡ್ ಡಿಶ್ ಇದ್ದರೆ ಚೆನ್ನಾಗಿರುತ್ತದೆ. ಥಟ್ಟಂತ ಆಗುವ ಬಟರ್ ಗಾರ್ಲಿಕ್ ಮಶ್ರೂಮ್ ಮಾಡುವ ವಿಧಾನ ಇಲ್ಲಿದೆ ನೋಡಿ. ಮನೆಯಲ್ಲಿ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು:
1 ಕಪ್ ಮಶ್ರೂಮ್, 1 ಟೇಬಲ್ ಸ್ಪೂನ್- ಬೆಣ್ಣೆ, 1 ಟೇಬಲ್ ಸ್ಪೂನ್- ಬೆಳ್ಳುಳ್ಳಿ- ಸಣ್ಣಗೆ ಹಚ್ಚಿದ್ದು, 1 ಟೀ ಸ್ಪೂನ್- ಕಾಳುಮೆಣಸು (ಜಜ್ಜಿದ್ದು), ಉಪ್ಪು-ರುಚಿಗೆ ತಕ್ಕಷ್ಟು, ಕೊತ್ತಂಬರಿಸೊಪ್ಪು-1 ಟೇಬಲ್ ಸ್ಪೂನ್, 1 ಟೀ ಸ್ಪೂನ್- ಮಿಕ್ಸಡ್ ಹರ್ಬ್ಸ್.
ಮಾಡುವ ವಿಧಾನ:
ಮಶ್ರೂಮ್ ಅನ್ನು ಚೆನ್ನಾಗಿ ತೊಳೆದು ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ. ನಂತರ ಗ್ಯಾಸ್ ಮೇಲೆ ಪ್ಯಾನ್ ಇಟ್ಟು ಅದಕ್ಕೆ ಬೆಣ್ಣೆ ಹಾಕಿ ಅದು ಕರಗುತ್ತಿದ್ದಂತೆ ಬೆಳ್ಳುಳ್ಳಿ ಸೇರಿಸಿ 2 ನಿಮಿಷಗಳ ಕಾಲ ಫ್ರೈ ಮಾಡಿ. ನಂತರ ಅದಕ್ಕೆ ಮಶ್ರೂಮ್ ಸೇರಿಸಿ ಮಿಕ್ಸ್ ಮಾಡಿ. ಸ್ವಲ್ಪ ಹೊತ್ತಿನ ನಂತರ ಮಶ್ರೂಮ್ ನೀರು ಬಿಡುತ್ತದೆ. ನೀರಿನ ಪಸೆಗಳೆಲ್ಲಾ ಆರುವವರೆಗೆ ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ಇದಕ್ಕೆ ಕಾಳುಮೆಣಸಿನ ಪುಡಿ, ಮಿಕ್ಸಡ್ ಹರ್ಬ್ಸ್ ಸೇರಿಸಿ ಮಿಕ್ಸ್ ಮಾಡಿ ಅದಕ್ಕೆ ಉಪ್ಪು, ಕೊತ್ತಂಬರಿಸೊಪ್ಪು ಸೇರಿಸಿ ಗ್ಯಾಸ್ ಆಫ್ ಮಾಡಿ.