ಕೇಂದ್ರ ಬಜೆಟ್‌ಗೂ ಮುನ್ನ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ನಾಳೆ ಬಜೆಟ್ ಮಂಡನೆಯಾಗಲಿದ್ದು, ಬಂಗಾರ ಹಾಗೂ ಬೆಳ್ಳಿ ದರ ಅಗ್ಗವಾಗಿದೆ. ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನ 57,000 ರೂಪಾಯಿ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಇದಲ್ಲದೇ ಬೆಳ್ಳಿಯ ಬೆಲೆ ಕೆಜಿಗೆ 68,500ರ ಆಸುಪಾಸಿನಲ್ಲಿದೆ. ರಾಜಧಾನಿ ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 80 ರೂಪಾಯಿ ಇಳಿಕೆಯಾಗಿ 56,880 ರೂಪಾಯಿಗಳಿಗೆ ತಲುಪಿದೆ.
ಕಳೆದ ವಹಿವಾಟು ಅಂತ್ಯಕ್ಕೆ ಬಂಗಾರದ ದರ 10 ಗ್ರಾಂಗೆ 56,960 ರೂಪಾಯಿಗೆ ತಲುಪಿತ್ತು. ಇದಲ್ಲದೆ ಎಂಸಿಎಕ್ಸ್‌ನಲ್ಲಿ ಬೆಳ್ಳಿಯ ಬೆಲೆ ಶೇಕಡಾ 0.07 ರಷ್ಟು ಕುಸಿದು ಕೆಜಿಗೆ 68,543 ರೂಪಾಯಿ ಆಗಿದೆ. ಕಳೆದ ವಹಿವಾಟು ಅಂತ್ಯಕ್ಕೆ ಒಂದು ಕೆಜಿ ಬೆಳ್ಳಿಯ ದರ 68,975 ರೂಪಾಯಿ ಆಗಿತ್ತು. ಇನ್ನು ಜಾಗತಿಕ ಮಾರುಕಟ್ಟೆಯಲ್ಲೂ ಚಿನ್ನ ಹಾಗೂ ಬೆಳ್ಳಿ ಕೊಂಚ ಅಗ್ಗವಾಗಿವೆ. ಅಮೆರಿಕದಲ್ಲಿ ಚಿನ್ನ ಪ್ರತಿ ಔನ್ಸ್‌ಗೆ ಶೇ.0.33ಯಷ್ಟು ಇಳಿಕೆಯೊಂದಿಗೆ 1,939.20 ಡಾಲರ್ ಆಗಿದೆ. ಬೆಳ್ಳಿಯ ಬೆಲೆ 0.47 ಪ್ರತಿಶತದಷ್ಟು ಕಡಿಮೆಯಾಗಿ 23.733 ಡಾಲರ್‌ಗೆ ಬಂದು ತಲುಪಿದೆ.