ಸಹದೇವ್ ಡಿರ್ಡೋ ಬಾಲಕನ ಬಗ್ಗೆ ನೀವು ಕೇಳಿರಬೇಕು ಅಲ್ವಾ..? ಅತ್ಯಂತ ಕಡಿಮೆ ಸಮಯದಲ್ಲಿ ಮನೆ ಮಾತಾಗಿರುವ ಹುಡುಗ ಸಹದೇವ್. ಛತ್ತೀಸ್‌ಗಢದ ಈ ಬಾಲಕ ಬಚ್ ಪನ್ ಕಾ ಪ್ಯಾರ್ ಹಾಡಿನ ಮೂಲಕ ಇಂಟರ್ನೆಟ್ ನಲ್ಲಿ ಸೆನ್ಸೇಷನ್ ಹುಟ್ಟುಹಾಕಿದ್ದ. ಇದೀಗ ಮತ್ತೆ ಈ ಬಾಲಕ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಾನೆ.
ಹೌದು, ಈ ಬಾರಿ ಹಾಡುವ ಮೂಲಕ ಅಲ್ಲ, ಬದಲಾಗಿ ನೃತ್ಯ ಮಾಡುವ ಮೂಲಕ ಸಹದೇವ್ ಸುದ್ದಿಯಾಗಿದ್ದಾನೆ. ‘ಇನ್ ಡಾ ಗೆಟ್ಟೊ’ ಎಂಬ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ್ದಾನೆ. ‘ವೈರಲ್‌ಬಾಯ್ ಸಹದೇವ್’ ಹೆಸರಿನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, 52,000ಕ್ಕೂ ಹೆಚ್ಚು ಲೈಕ್ ಗಳು ಬಂದಿವೆ. ಈತನ ನೃತ್ಯವನ್ನು ನೋಡಿದ ನೆಟ್ಟಿಗರು ರೋಮಾಂಚನಗೊಂಡಿದ್ದಾರೆ. ಕಾಮೆಂಟ್ಸ್ ವಿಭಾಗವು ನಗು ಹಾಗೂ ಹೃದಯದ ಎಮೋಜಿಗಳಿಂದ ತುಂಬಿ ಹೋಗಿತ್ತು.
https://www.instagram.com/reel/CUPWQO6JFpX/?utm_source=ig_embed&ig_rid=93e9300e-7641-462a-bda2-e4a42aab1e48