ಕೊಲೆ, ಸುಲಿಗೆ, ದರೋಡೆ, ಕೌಟುಂಬಿಕ ಹಿಂಸಾಚಾರ ಇವೆಲ್ಲ ಪ್ರತಿನಿತ್ಯ ನಾವು ಕೇಳುವ ಅಪರಾಧಗಳು. ಆದ್ರೆ ಹೂಸು ಬಿಡುವುದು ಕೂಡ ಬಹುದೊಡ್ಡ ಅಪರಾಧ ಅನ್ನೋದು ಬ್ರಿಟನ್‌ನಲ್ಲಿ ಸಾಬೀತಾಗಿದೆ.
ಆರೋಪಿಯೊಬ್ಬ ಪೊಲೀಸ್ ಅಧಿಕಾರಿಯ ಮುಖದ ಮೇಲೆ ಹೂಸು ಬಿಟ್ಟು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾನೆ. 41 ವರ್ಷದ ಮ್ಯಾಥ್ಯೂ ಹ್ಯಾಪ್‌ಗುಡ್ ಎಂಬಾತ ಅಂಗಡಿಯೊಂದನ್ನು ದೋಚಿದ್ದ.
ಟೆಸ್ಕೊದಿಂದ ಸುಮಾರು 3086 ರೂಪಾಯಿ ಮೌಲ್ಯದ ಬಿಯರ್ ಮತ್ತು ಸೈಡರ್ ಅನ್ನು ಕದ್ದಿದ್ದ ಮ್ಯಾಥ್ಯೂನನ್ನು ಪೊಲೀಸರು ಬಂಧಿಸಿದ್ದರು.
ಈ ಸಮಯದಲ್ಲಿ ಆತ ಅಧಿಕಾರಿಯ ಮುಖದ ಮೇಲೆ ಗ್ಯಾಸ್ ಬಿಟ್ಟಿದ್ದಾನೆ. ಇದರಿಂದಾಗಿ ಆತನ ಮೇಲಿದ್ದ ಪ್ರಕರಣಗಳೆಲ್ಲ ಮತ್ತಷ್ಟು ಬಿಗಿಯಾಯ್ತು. ಅವನನ್ನು ಬಂಧಿಸಿ ಎಳೆದೊಯ್ದ ಪೊಲೀಸರು ಜನ್ಮಜಾಲಾಡಿದ್ದಾರೆ. ಈ ವೇಳೆ ಆತ ಬಹಳಷ್ಟು ಅಪರಾಧ ಪ್ರಕರಣಗಳಲ್ಲಿ ಈ ಹಿಂದೆಯೂ ಭಾಗಿಯಾಗಿದ್ದ ಅನ್ನೋದು ಸಾಬೀತಾಗಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಇಯಾನ್ ಪ್ರಿಂಗಲ್ ಕ್ಯೂಸಿ, ಮ್ಯಾಥ್ಯೂಗೆ 34 ತಿಂಗಳ ಜೈಲು ಶಿಕ್ಷೆ ವಿಧಿಸಿದ್ದಾರೆ. ಆತನ ವಿರುದ್ಧ 83 ಅಪರಾಧ ಪ್ರಕರಣಗಳಿದ್ದವು. ಮದ್ಯ ವ್ಯಸನ ಹಾಗೂ ಮಾದಕ ದ್ರವ್ಯದ ಚಟಕ್ಕೂ ಈ ಕೇಸ್‌ಗಳಿಗೂ ಸಂಬಂಧವಿದೆ ಅಂತಾ ನ್ಯಾಯಾಧೀಶರು ಹೇಳಿದ್ದಾರೆ.
ಇಂಥದ್ದೇ ಘಟನೆಯೊಂದು ವಿಯೆನ್ನಾದಲ್ಲಿ ನಡೆದಿತ್ತು. ಸಾರ್ವಜನಿಕ ಸ್ಥಳದಲ್ಲಿ ಹೂಸು ಬಿಟ್ಟ ವ್ಯಕ್ತಿಗೆ ದಂಡ ವಿಧಿಸಲಾಗಿತ್ತು. ಆತ ಅದನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದ. ಹೂಸು ಬಿಡುವುದು ಕೇವಲ ಜೈವಿಕ ಪ್ರಕ್ರಿಯೆ ಎಂದು ನ್ಯಾಯಾಲಯ ಹೇಳಿತ್ತು. ಆದ್ರೆ ಈ ರೀತಿ ಗ್ಯಾಸ್ ಬಿಡುವುದು ಸಭ್ಯತೆಯ ಎಲ್ಲೆಗಳನ್ನು ಮೀರಿದ ಅಭಿವ್ಯಕ್ತಿಯ ರೂಪ ಎಂದೂ ಅಭಿಪ್ರಾಯಪಟ್ಟಿತ್ತು.