ಕಿರಿದಾದ ಪರ್ವತ ರಸ್ತೆಯಲ್ಲಿ ಚಾಲಕನು ಕಾರೊಂದನ್ನು ಪರಿಪೂರ್ಣವಾಗಿ ಯು-ಟರ್ನ್ ಮಾಡಿದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ನೀಲಿ ಬಣ್ಣದ ಕಾರೊಂದು ಇಕ್ಕಟ್ಟಿನ ರಸ್ತೆಯಲ್ಲಿ ನಿಧಾನವಾಗಿ ತಿರುಗುತ್ತಾ, ಆ ರಸ್ತೆಯ ಮೇಲಿದ್ದ ಬಂಡೆಯನ್ನು ಹತ್ತಿ ಸಂಪೂರ್ಣವಾಗಿ ಯೂಟರ್ನ್ ಆಗುವುದನ್ನು ನೋಡಿದ ವೀಕ್ಷಕರು ದಿಗ್ಭ್ರಮೆಗೊಂಡಿದ್ದಂತು ನಿಜ.
ವಿಡಿಯೋದಲ್ಲಿನ ಕೆಲ ಹಂತಗಳನ್ನ ನೋಡುವಾಗಲೆಲ್ಲ ದೇಹ ಅದಿರುವಂತಾಗುತ್ತದೆ. ಅಂತಾ ಅಪಾಯಕಾರಿ ರಸ್ತೆಯ ಅಂಚಿನಲ್ಲಿ ವಾಹನ ಚಲಿಸುತ್ತದೆ. ಇನ್ನೇನು ಕಾರು ರಸ್ತೆಯಿಂದ ಹಿಂದಿರುವ ಪಾತಾಳಕ್ಕೆ ಬಿದ್ದೆಬಿಡ್ತಾ ಅನ್ನೋ ಭಯ ಸಹ ಉಂಟಾಗುತ್ತದೆ. ಆದರೆ ಚಾಲಕ ಯಶಸ್ವಿಯಾಗಿ ಯೂಟರ್ನ್ ಮಾಡಿ ಯಾವುದೇ ಹಾನಿಯಾಗದಂತೆ ಗಾಡಿ ಓಡಿಸಿದ್ದಾನೆ.
ಈ ವಿಡಿಯೋಗೆ ಒಂದೇ ದಿನದಲ್ಲಿ ಟ್ವಿಟ್ಟರ್ ಇನ್ಸ್ಟಾಗ್ರಾಮ್ ನಲ್ಲಿ ಮಿಲಿಯನ್ ಗಟ್ಟಲೆ ವೀವ್ಸ್ ಬಂದಿದೆ. ವಿಡಿಯೋ ನೋಡಿದ ಪ್ರತಿಯೊಬ್ಬರು ಚಾಲಕನ ಕೌಶಲ್ಯವನ್ನು ಹಾಡಿ ಹೊಗಳಿದ್ದಾರೆ. ಆದರೆ ಈ ವಿಡಿಯೋದ ಸತ್ಯವೇ ಬೇರೆ ಎಂಬುದು ಫ್ಯಾಕ್ಟ್ ಚೆಕ್ ನಲ್ಲಿ ಬಯಲಾಗಿದೆ.
ಅಷ್ಟಕ್ಕೂ ಈ ವಿಡಿಯೋವನ್ನ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಡ್ರೈವಿಂಗ್‌ಸ್ಕಿಲ್ ಎಂಬ ಯೂಟ್ಯೂಬ್ ಚಾನೆಲ್ ಮೊದಲ ಬಾರಿ ಹಂಚಿಕೊಂಡಿದೆ. ವೈರಲ್ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಚಾಲಕ ಸಾಮಾನ್ಯ ಚಾಲಕನಲ್ಲ, ಅವರು ಕಾರು ಚಾಲನೆಯಲ್ಲಿ ಪರಿಣಿತಿ ಹೊಂದಿರುವವರು.
ಯಾರೋ ಒಬ್ಬ ಸಾಮಾನ್ಯ ಚಾಲಕ ಕಿರಿದಾದ ರಸ್ತೆಯಲ್ಲಿ ಸಿಲುಕಿಕೊಂಡು ನಂತರ ಬಚಾವಾದ ಘಟನೆಯ ವಿಡಿಯೋ ಇದಲ್ಲ. ಬದಲಿಗೆ ಅತ್ಯಂತ ಕಿರಿದಾದ ರಸ್ತೆಗಳಲ್ಲಿ ನಮ್ಮನ್ನ ನಾವು ಕಾಪಾಡಿಕೊಳ್ಳುತ್ತಾ ಸುರಕ್ಷಿತವಾಗಿ ಹೇಗೆ ಯೂಟರ್ನ್ ಮಾಡಬಹುದು ಎಂದು ಡ್ರೈವಿಂಗ್‌ಸ್ಕಿಲ್ ಹಂಚಿಕೊಂಡ ಡೆಮಾನ್ಸ್ಟ್ರೇಷನ್ ವಿಡಿಯೋ. ಅಷ್ಟೇ ಅಲ್ಲಾ ಈ ವಿಡಿಯೋವನ್ನ ಇನ್ನೊಂದು ಕೋನದಿಂದ ಶೂಟ್ ಮಾಡಲಾಗಿದ್ದು ಯೂಟ್ಯೂಬ್ನಲ್ಲಿ ಆ ವಿಡಿಯೋ ಲಭ್ಯವಿದೆ. ಅದರಲ್ಲಿ ಈ ವಾಹನ ಯಾವುದೋ ಬಂಡೆಯ ಅಂಚಿನಲ್ಲಿ ಇರಲಿಲ್ಲ ಎಂಬುದು ತಿಳಿಯುತ್ತದೆ.
https://youtu.be/k08zy6HWTP8