
ಹೌದು, ನಿಮ್ಮ ತಲೆ ತಿರುಗುವಂತೆ ಮಾಡುವ ಹಲವಾರು ಆಪ್ಟಿಕಲ್ ಭ್ರಮೆಗಳು ಅಥವಾ ಒಗಟುಗಳನ್ನು ನೀವು ನೋಡಿರಬಹುದು. ಅಂತಹ ಒಂದು ಒಗಟು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅದನ್ನು ಚುರುಕಾದ ಮೆದುಳು ಹೊಂದಿರುವವರು ಮಾತ್ರ ಕಂಡುಹಿಡಿಯಬಹುದು.
ವೈರಲ್ ಚಿತ್ರದಲ್ಲಿ ಕೆಲವು ಬೃಹತ್ ಬೂದು ಮತ್ತು ತಿಳಿ ಕಂದು ಬಣ್ಣದ ಬಂಡೆಗಳಿವೆ. ಎಲ್ಲೋ ಬಂಡೆಗಳ ನಡುವೆ ಸಣ್ಣ ಮೊಲವಿದೆ. ಆದರೆ, ಒಂದೇ ರೀತಿಯ ಬಣ್ಣವನ್ನು ಹೊಂದಿರುವುದರಿಂದ ಮರೆಮಾಚಿದೆ.
ಬಹುಶಃ ಅಲ್ಲಿ ಮೊಲ ಇಲ್ಲವೇನೋ ಎಂದೆನಿಸಬಹುದು. ಆದರೆ, ನೀವು ಸೂಕ್ಷ್ಮವಾಗಿ ಗಮನಿಸಿದರೆ ಗುಹೆಯ ಬಳಿ ಅದರ ಕಪ್ಪು ಕಣ್ಣು ಮತ್ತು ಬಾಲ ಕಾಣುವ ಮೊಲವನ್ನು ನೀವು ಗುರುತಿಸಬಹುದು.