ಜೇನುತುಪ್ಪದ ಬಂಗಾರದ ಹೊಳಪು ಬಾಯಲ್ಲಿ ನೀರೂರಿಸತ್ತೆ. ಕೇವಲ ಇದರ ಬಣ್ಣ ಮಾತ್ರವಲ್ಲ, ರುಚಿಯೂ ಅದ್ಭುತ. ನಿಸರ್ಗದತ್ತವಾಗಿ ಸಿಗುವ ಸಿಹಿ ಜೇನುತುಪ್ಪ, ಬಳಸುವಾಗ ಕೆಲವೊಂದು ಎಚ್ಚರಿಕೆ ವಹಿಸುವುದು ಅಗತ್ಯ. ಆಯುರ್ವೇದದಲ್ಲಿ ಜೇನಿಗೆ ಬಹಳ ಮಹತ್ವ ಇದೆ. ಜೇನುತುಪ್ಪದಲ್ಲಿ ಹಲವಾರು ವಿಧಗಳಿವೆ.
ಯಾವುದೇ ವಿಧವಾದ ಜೇನುತುಪ್ಪವಾದರೂ ಸರಿಯೇ ಇದನ್ನು ನೇರವಾಗಿ ಕುದಿಸಬಾರದು. ಯಾವುದೇ ಆಹಾರದಲ್ಲಿ ಬಳಸುವಾಗಲೂ ಒಲೆಯ ಮೇಲೆ ಇಟ್ಟು ಬಿಸಿ ಮಾಡಬಾರದು. ಅದರಲ್ಲಿರುವ ಸತ್ವಗಳೆಲ್ಲಾ ಹಾಳಾಗಿಬಿಡುತ್ತದೆ.
ವರ್ಷಾನುಗಟ್ಟಲೇ ಇಟ್ಟರು ಜೇನುತುಪ್ಪ ಹಾಳಾಗುವುದಿಲ್ಲ. ಎಕ್ಸ್ಪೈರಿ ಇಲ್ಲದ ಕೆಲವೇ ಕೆಲವು ಆಹಾರ ಪದಾರ್ಥಗಳಲ್ಲಿ ಜೇನುತುಪ್ಪ ಕೂಡಾ ಒಂದು.
ಆದರೆ ಜೇನುತುಪ್ಪ ಮರುಳು ಮರುಳಾಗಿದ್ದರೆ ಅದನ್ನು ಉಪಯೋಗಿಸಬಾರದು. ಇದು ಶುದ್ಧ ಜೇನುತುಪ್ಪವಲ್ಲ ಎಂದರ್ಥ.