ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಯುವಜನತೆ ಸೆಲ್ಫಿ ಮೋಜಿಗೆ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದು, ಸೆಲ್ಫಿ ಕ್ರೇಜ್ ಗೆ ಇಬ್ಬರು ಯುವಕರು ಬಲಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ತಾವರೆಕೆರೆ ಬಳಿ ರಾಷ್ಟ್ರೀಯ ಹೆದ್ದಾರಿ 75ರ ಫ್ಲೈಓವರ್ ಮೇಲೆ ಕಾರು ನಿಲ್ಲಿಸಿ ಸೆಲ್ಫಿ ತೆಗೆಯಲು ಯುವಕರಿಬ್ಬರು ಮುಂದಾಗಿದ್ದಾರೆ. ಈ ವೇಳೆ ವೇಗವಾಗಿ ಬಂದ ಕ್ಯಾಂಟರ್ ಯುವಕರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಳೆ ನಡುವೆಯೂ ಕರ್ತವ್ಯ ನಿರ್ವಹಿಸಿದ ಪೌರ ಕಾರ್ಮಿಕ ಮಹಿಳೆ; ನೆಟ್ಟಿಗರ ವ್ಯಾಪಕ ಪ್ರಶಂಸೆ
ವೈಟ್ ಫೀಲ್ಡ್ ನಿವಾಸಿಗಳಾದ ದಿನೇಶ್ ಹಾಗೂ ವಿನಯ್ ಮೃತರು. ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.