ಈಗ ಎಲ್ಲರೂ ಆನ್‌ಲೈನ್ ಶಾಪಿಂಗ್ ಅನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ. ಗ್ರಾಹಕರಿಗೆ ಶಾಪಿಂಗ್ ಸರಳವಾಗಲಿ ಅನ್ನೋ ಕಾರಣಕ್ಕೆ ಇ-ಕಾಮರ್ಸ್ ಕಂಪನಿಗಳು COD ಆಯ್ಕೆಯನ್ನು ನೀಡುತ್ತವೆ. ಅಂದರೆ ಯಾವುದೇ ಉತ್ಪನ್ನವನ್ನು ನೀವು ಆರ್ಡರ್ ಮಾಡಿದರೆ ಅದನ್ನು ಡೆಲಿವರಿ ಮಾಡುವ ಸಂದರ್ಭದಲ್ಲಿ ಹಣ ಪಾವತಿಸಿ ಪಡೆಯಬಹುದು.
ಆದ್ರೀಗ ಕ್ಯಾಶ್ ಆನ್ ಡೆಲಿವರಿಯನ್ನು ನೆಚ್ಚಿಕೊಂಡಿರುವ ಗ್ರಾಹಕರಿಗೆ ಫ್ಲಿಪ್‌ಕಾರ್ಟ್ ಶಾಕ್ ಕೊಟ್ಟಿದೆ. COD ಬೆಲೆಗಳಲ್ಲಿ ಭಾರೀ ಏರಿಕೆ ಮಾಡಿದೆ. ಕ್ಯಾಶ್ ಆನ್ ಡೆಲಿವರಿ ಆಯ್ಕೆ ಮಾಡಿಕೊಂಡ್ರೆ ಗ್ರಾಹಕರು ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ.
ಕ್ಯಾಶ್ ಆನ್ ಡೆಲಿವರಿ ಆಯ್ಕೆ ಮಾಡಿಕೊಂಡ ಗ್ರಾಹಕರಿಗೆ ಹೆಚ್ಚುವರಿಯಾಗಿ 5 ರೂಪಾಯಿ ಶುಲ್ಕ ವಿಧಿಸಲಾಗುತ್ತಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡಿದರೆ, 500 ರೂಪಾಯಿಗಿಂತ ಕಡಿಮೆ ಬೆಲೆಯ ಉತ್ಪನ್ನವನ್ನು ಆರ್ಡರ್ ಮಾಡಿದರೆ ಅದಕ್ಕಾಗಿ ನೀವು ಡೆಲಿವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಸದ್ಯ 40 ರೂಪಾಯಿ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುತ್ತಿದೆ. ಉತ್ಪನ್ನದ ಬೆಲೆ 500 ರೂಪಾಯಿಗಿಂತ ಹೆಚ್ಚಿದ್ದರೆ ಸಿಓಡಿ ವಿತರಣೆಗೆ ಯಾವುದೇ ಹೆಚ್ಚುವರಿ ಶುಲ್ಕವನ್ನು ಕೇಳುವುದಿಲ್ಲ.