ಕಳೆದ ವಾರ Realme 9 ಮೊಬೈಲ್ ಅನ್ನು ಕಂಪನಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. Realme ಕಂಪನಿ ಇತ್ತೀಚಿನ ಲಾಂಚ್ ಮಾಡಿದ ಆರನೇ ಮೊಬೈಲ್ ಇದು. ಇವತ್ತಿನಿಂದ Realme 9 ಮೊಬೈಲ್ ಮಾರಾಟ ಭಾರತದಲ್ಲಿ ಶುರುವಾಗಿದೆ.
Realme 9 ಮೊಬೈಲ್, Redmi Note 11S ಮತ್ತು Poco M4 Proಗೆ ಪೈಪೋಟಿ ಒಡ್ಡಲಿದೆ. ಕ್ವಾಲ್ಕಾಮ್ ಸ್ನಾಪ್ ಡ್ರಾಗನ್, 680 ಪ್ರೊಸೆಸರ್ ಮತ್ತು 5000mAh ಬ್ಯಾಟರಿಯನ್ನು ಈ ಫೋನ್ ಹೊಂದಿದೆ. ಇದರಲ್ಲಿ 90Hz AMOLED ಡಿಸ್‌ಪ್ಲೇ ಮತ್ತು 108MP ಕ್ಯಾಮೆರಾ ಸೆಟಪ್ ಅಳವಡಿಸಲಾಗಿದೆ.
Realme 9 ಎರಡು ಕಾನ್ಫಿಗರೇಶನ್‌ಗಳಲ್ಲಿ ಬರುತ್ತದೆ. 6GB + 128GB ಮತ್ತು 8GB + 128GB. ಸಾಧನದ 6GB + 128GB ರೂಪಾಂತರದ ಬೆಲೆ 17,999 ರೂಪಾಯಿ. 8GB + 128GB ಮೊಬೈಲ್ ಬೆಲೆ ಭಾರತದಲ್ಲಿ 18,999 ರೂಪಾಯಿ. Realme 9 ಫೋನ್, Flipkart ಮತ್ತು Realme.com ನಲ್ಲಿ ಲಭ್ಯವಿದೆ. ಲಾಂಚ್ ಆಫರ್ ಕೂಡ ಇದೆ. Flipkart ಮತ್ತು Realme.com ನಲ್ಲಿ HDFC ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಖರೀದಿ ಮಾಡಿದ್ರೆ, 2000 ರೂಪಾಯಿ ರಿಯಾಯಿತಿ ಸಿಗಲಿದೆ.
SBI ಡೆಬಿಟ್ ಕಾರ್ಡ್ ಬಳಸಿ ಕೊಂಡುಕೊಂಡರೂ 2000 ರೂಪಾಯಿ ಡಿಸ್ಕೌಂಟ್ ಸಿಗಲಿದ್ದು, ಈ ಆಫರ್ ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರ ಲಭ್ಯವಿದೆ. ಇದಲ್ಲದೆ Flipkart ಮೂಲಕ Axis ಬ್ಯಾಂಕ್ ಕಾರ್ಡ್‌ನಲ್ಲಿ ಪೇಮೆಂಟ್ ಮಾಡಿ ಈ ಮೊಬೈಲ್ ಖರೀದಿ ಮಾಡಿದ್ರೆ ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಸಿಗುತ್ತದೆ. ಕೇವಲ 4999 ರೂಪಾಯಿಗೆ Google Nest Hub(2ನೇ ಜನರೇಶನ್) ಪಡೆಯಬಹುದು. ಕೇವಲ 1999 ರೂಪಾಯಿಗೆ Google Nest Mini ಸಿಗುತ್ತದೆ. 6999 ರೂಪಾಯಿಗೆ Google Pixel Buds A-ಸರಣಿ ನಿಮ್ಮದಾಗಲಿದೆ. Realme 9 4G 1080 × 2400 ಪಿಕ್ಸೆಲ್ ರೆಸಲ್ಯೂಶನ್, 90Hz ರಿಫ್ರೆಶ್ ರೇಟ್ ಮತ್ತು 360Hz ಟಚ್ ಸ್ಯಾಂಪ್ಲಿಂಗ್ ದರದೊಂದಿಗೆ 6.4-ಇಂಚಿನ ಪೂರ್ಣ HD+ AMOLED ಡಿಸ್‌ಪ್ಲೇ ಹೊಂದಿದೆ.
ಟ್ರಿಪಲ್-ರೇರ್ ಕ್ಯಾಮೆರಾ ಸೆಟಪ್ ಇದರಲ್ಲಿದೆ. ತುಂಬಾ ಹತ್ತಿರದಿಂದ ಫೋಟೋ ಕ್ಲಿಕ್ಕಿಸಬಹುದು. ಸೆಲ್ಫಿಗಳು ಮತ್ತು ವಿಡಿಯೊ ಕಾಲ್ ಗಳಿಗಾಗಿ 16MP ಫ್ರಂಟ್ ಕ್ಯಾಮರಾ ಇದೆ. ಇದರಲ್ಲಿ 5000mAh ಬ್ಯಾಟರಿ ಅಳವಡಿಸಲಾಗಿದೆ. ಫಾಸ್ಟ್ ಚಾರ್ಜಿಂಗ್, ಟೈಪ್-ಸಿ ಚಾರ್ಜಿಂಗ್ ಪೋರ್ಟ್, ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್, ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು 3.5 ಎಂಎಂ ಆಡಿಯೊ ಪೋರ್ಟ್ ಅನ್ನು ಸಹ ಹೊಂದಿದೆ. Realme 9 ಮೊಬೈಲ್, ಸನ್ ಬರ್ಸ್ಟ್ ಗೋಲ್ಡ್, ಸ್ಟಾರ್ ಗೇಜ್ ವೈಟ್ ಮತ್ತು ಮೆಟಿಯರ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿದೆ. ಇದರ ತೂಕ 178 ಗ್ರಾಂಗಳಷ್ಟಿದೆ.