ಆಂಧ್ರಪ್ರದೇಶದ ತಿರುಪತಿ ತಿರುಮಲ ವೆಂಕಟೇಶ್ವರ ದೇವಾಲಯದಲ್ಲಿ ಕಾಲ್ತುಳಿತ ಸಂಭವಿಸಿದೆ. ನೂಕು ನುಗ್ಗಲಿನಲ್ಲಿ ಹಲವು ಭಕ್ತರು ಗಾಯಗೊಂಡಿದ್ದಾರೆ. ಸರ್ವದರ್ಶನ ಟಿಕೆಟ್ ಪಡೆದುಕೊಳ್ಳಲು ಭಕ್ತರು ಟಿಕೆಟ್ ಕೌಂಟರ್ ಬಳಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಈ ವೇಳೆ ಕಾಲ್ತುಳಿತ ಸಂಭವಿಸಿದೆ. ಸರ್ವದರ್ಶನದಲ್ಲಿ ಎಲ್ಲರಿಗೂ ವೆಂಕಟೇಶ್ವರನ ದರ್ಶನ ಮಾಡಲು ಅವಕಾಶ ನೀಡಲಾಗುತ್ತದೆ. ಟಿಟಿಡಿ, ಭಕ್ತರಿಗೆ ಉಚಿತ ಟೋಕನ್ ಗಳನ್ನು ನೀಡುತ್ತದೆ. ಕಳೆದ ಎರಡು ದಿನಗಳಿಂದ ಸರ್ವದರ್ಶನ ಟಿಕೆಟ್ ವಿತರಣೆಯನ್ನು ಸ್ಥಗಿತ ಮಾಡಲಾಗಿತ್ತು.
ಹಾಗಾಗಿ ಇಂದು ದೇವಸ್ಥಾನದಲ್ಲಿ ಭಕ್ತರ ಸಂಖ್ಯೆಯೂ ಹೆಚ್ಚಾಗಿತ್ತು. ದೇವಸ್ಥಾನದಲ್ಲಿರೋ ಕಬ್ಬಿಣದ ಬೇಲಿಯನ್ನು ಹಾರಿ ಒಳಕ್ಕೆ ನುಗ್ಗಲು ಭಕ್ತರು ಯತ್ನಿಸಿದ್ದಾರೆ. ಈ ವೇಳೆ ಗೊಂದಲದ ವಾತಾವರಣ ಸೃಷ್ಟಿಯಾಗಿದ್ದಲ್ಲದೆ, ಕಾಲ್ತುಳಿತವೂ ಸಂಭವಿಸಿದೆ.
ಆದ್ರೆ ಟಿಟಿಡಿ ಅಧಿಕಾರಿಗಳು ಸೃಷ್ಟಿಸಿದ ಗೊಂದಲದಿಂದಾಗಿಯೇ ಈ ರೀತಿ ನೂಕು ನುಗ್ಗಲು ಸೃಷ್ಟಿಯಾಗಿತ್ತು ಅಂತಾ ಸ್ಥಳದಲ್ಲಿದ್ದ ಭಕ್ತರು ಆರೋಪಿಸಿದ್ದಾರೆ. ಫ್ರೀ ಟೋಕನ್ ಪಡೆಯಲು ಜನಜಂಗುಳಿ ಜಾಸ್ತಿ ಇದ್ದಿದ್ರಿಂದ ಭಕ್ತರಿಗೆ ನೇರವಾಗಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲು ಟಿಟಿಡಿ ಮುಂದಾಗಿತ್ತು. ಇದೇ ಕಾಲ್ತುಳಿತಕ್ಕೆ ಕಾರಣ ಎನ್ನಲಾಗ್ತಾ ಇದೆ. ಸದ್ಯ ಪರಿಸ್ಥಿತಿ ಹತೋಟಿಯಲ್ಲಿದ್ದು, ಯಾವುದೇ ತೊಂದರೆಯಾಗಿಲ್ಲ ಅಂತಾ ಟಿಟಿಡಿ ಸ್ಪಷ್ಟಪಡಿಸಿದೆ.