ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿಯಲ್ಲಿ ಜನರು ಫ್ರೀಜ್ ಮಾಡಿದ ಆಹಾರವನ್ನು ಹೆಚ್ಚಾಗಿ ಬಳಸುತ್ತಾರೆ. ಇದರಿಂದ ಕೆಲಸ ಬಹಳ ಸುಲಭವಾಗುವುದು ನಿಜ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಯಾಕೆಂದರೆ ಇದಕ್ಕೆ ಹಾನಿಕಾರಕ ಅಂಶಗಳನ್ನು ಬಳಸಲಾಗುತ್ತದೆ. ಇದನ್ನು ಸೇವಿಸಿದರೆ ದೇಹಕ್ಕೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.
-ಈ ಆಹಾರವನ್ನು ತಾಜಾವಾಗಿಡಲು ಮತ್ತು ರುಚಿಯನ್ನು ಹೆಚ್ಚಿಸಲು ಪಿಷ್ಠವನ್ನು ಬಳಸಲಾಗುತ್ತದೆ. ಇದು ಮಧುಮೇಹ ರೋಗಿಗಳಿಗೆ ಹಾನಿಕಾರವಾಗಿದೆ.
-ಈ ಆಹಾರದಲ್ಲಿ ಸೇರಿಸಿರುವ ಕೊಬ್ಬಗಳು ಅಪಧಮನಿಗಳ ಸಮಸ್ಯೆಯನ್ನು, ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದನ್ನು ಸೇವಿಸಿದರೆ ಹೃದಯದ ಸಮಸ್ಯೆ ಕಾಡುತ್ತದೆ.
-ಈ ಆಹಾರದಲ್ಲಿ ಕೊಬ್ಬು ಹೆಚ್ಚಾಗಿರುವುದರಿಂದ ಇದನ್ನು ಸೇವಿಸಿದರೆ ತೂಕ ಹೆಚ್ಚಾಗುವ ಸಾಧ್ಯತೆ ಇದೆ.
-ಈ ಆಹಾರವನ್ನು ಸೇವಿಸಿದರೆ ಮೇದೋಜ್ಜಿರಕ ಗ್ರಂಥಿಯ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.