alex Certify ಫ್ರಿಡ್ಜ್‌ನಿಂದ ಬರುವ ಗಬ್ಬು ವಾಸನೆ ಹೋಗಲಾಡಿಸಲು ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫ್ರಿಡ್ಜ್‌ನಿಂದ ಬರುವ ಗಬ್ಬು ವಾಸನೆ ಹೋಗಲಾಡಿಸಲು ಹೀಗೆ ಮಾಡಿ

ಹಣ್ಣು, ತರಕಾರಿ, ಸೊಪ್ಪುಗಳು, ಉಳಿದ ತಿಂಡಿ-ತಿನಿಸು ಎಲ್ಲವನ್ನೂ ನಾವು ಫ್ರಿಡ್ಜ್‌ನಲ್ಲಿ ಇಡುತ್ತೇವೆ. ಇದರ ಜೊತೆಗೆ ಹಾಲು, ಮೊಸರು, ಕಾಳುಗಳು, ಚಾಕ್ಲೇಟ್‌ ಹೀಗೆ ಎಲ್ಲವನ್ನೂ ರೆಫ್ರಿಜರೇಟರ್‌ನಲ್ಲಿ ಇರಿಸಲಾಗುತ್ತದೆ. ಅವುಗಳನ್ನು ದೀರ್ಘಕಾಲದವರೆಗೆ ಸಂಗ್ರಹಿಸುತ್ತೇವೆ. ಈ ಕಾರಣದಿಂದ  ಅನೇಕ ಬಾರಿ ರೆಫ್ರಿಜರೇಟರ್‌ನಿಂದ ವಾಸನೆ ಬರಲಾರಂಭಿಸುತ್ತದೆ. ಫ್ರಿಡ್ಜ್‌ ಕ್ಲೀನ್‌ ಮಾಡಿದ್ರೂ ವಾಸನೆ ಹೋಗುವುದಿಲ್ಲ. ಫ್ರಿಡ್ಜ್‌ನ ವಾಸನೆ ದೂರಮಾಡಲು ಕೆಲವೊಂದು ಸುಲಭದ ತಂತ್ರಗಳಿವೆ.

ಅನೇಕ ಬಾರಿ ತಿನಿಸುಗಳಿಗೆ ಮುಚ್ಚಳ ಹಾಕದೇ ನಾವು ಫ್ರಿಡ್ಜ್‌ನಲ್ಲಿಟ್ಟುಬಿಡುತ್ತೇವೆ. ಇದರಿಂದಾಗಿ ಇಡೀ ಫ್ರಿಡ್ಜ್ ವಾಸನೆ ಬರಲಾರಂಭಿಸುತ್ತದೆ. ಕೆಲವೊಮ್ಮೆ ಆಹಾರ, ಹಾಲು ಅಥವಾ ಜ್ಯೂಸ್ ಫ್ರಿಡ್ಜ್ ಒಳಗೆ ಚೆಲ್ಲಿ ಹೋಗುತ್ತದೆ. ಇದರಿಂದ ಕೂಡ ಫ್ರಿಡ್ಜ್‌ ಕೊಳಕಾಗುತ್ತದೆ. ಕೆಲವು ಹಸಿರು ತರಕಾರಿಗಳನ್ನು ದೀರ್ಘಕಾಲದವರೆಗೆ ಇಡುವುದರಿಂದ ಅವು ಕೊಳೆತು ವಾಸನೆ ಬರಬಹುದು. ಆಹಾರ ಪದಾರ್ಥಗಳನ್ನು ಫ್ರಿಡ್ಜ್‌ನಲ್ಲಿ ಇಡುವಾಗ  ಈ ವಿಷಯಗಳನ್ನು ಗಮನದಲ್ಲಿರಿಸಿಕೊಂಡರೆ ವಾಸನೆಯನ್ನು ತಪ್ಪಿಸಬಹುದು.

ಬ್ರೆಡ್: ಬ್ರೆಡ್ ಅನ್ನು ಹೆಚ್ಚಿನ ಮನೆಗಳಲ್ಲಿ ಬಳಸುತ್ತಾರೆ. ಈ ಬ್ರೆಡ್‌ ಫ್ರಿಡ್ಜ್‌ ವಾಸನೆಯನ್ನು ದೂರಮಾಡಲು ಸಹಕಾರಿಯಾಗಿದೆ. ಫ್ರಿಡ್ಜ್‌ನಿಂದ ವಾಸನೆ ಬರುತ್ತಿದ್ದರೆ 2-3 ಬ್ರೆಡ್‌ಗಳನ್ನು ಫ್ರಿಡ್ಜ್‌ನೊಳಗೆ ಇರಿಸಿ.ಇದು ವಾಸನೆಯನ್ನೆಲ್ಲ ಹೀರಿಕೊಳ್ಳುತ್ತದೆ.

ಕಿತ್ತಳೆ: ಫ್ರಿಡ್ಜ್‌ನಿಂದ ಬರುವ ವಾಸನೆಯನ್ನು ಹೋಗಲಾಡಿಸಲು ಕಿತ್ತಳೆಯನ್ನು ಕೂಡ ಬಳಸಬಹುದು. ಕಿತ್ತಳೆ ರಸವನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಮಿಶ್ರಣ ಮಾಡಿ ಮತ್ತು ಅದರಿಂದ ಫ್ರಿಜ್ ಅನ್ನು ಸ್ವಚ್ಛಗೊಳಿಸಿ. ಇದು ಫ್ರಿಡ್ಜ್‌ನ ಎಲ್ಲಾ ವಾಸನೆಯನ್ನು ತೆಗೆದುಹಾಕುತ್ತದೆ. ಕಿತ್ತಳೆ ಬದಲಿಗೆ ಪುದೀನಾ ಕೂಡ ಬಳಸಬಹುದು. ಇದಲ್ಲದೇ ಫ್ರಿಡ್ಜ್ ಕ್ಲೀನ್ ಮಾಡಿದ ನಂತರ ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಫ್ರಿಡ್ಜ್ ಒಳಗೆ ಇಡಬಹುದು. ಇದರಿಂದಲೂ ವಾಸನೆ ದೂರವಾಗುತ್ತದೆ.

ಕಾಫಿ ಬೀಜ: ಫ್ರಿಡ್ಜ್‌ನ ದುರ್ವಾಸನೆ ಹೋಗಲಾಡಿಸಲು ಕಾಫಿ ಬೀಜಗಳು ಸಹ ಉತ್ತಮ ಆಯ್ಕೆಯಾಗಿದೆ. ಕಾಫಿಯ ವಾಸನೆಯು ತುಂಬಾ ಪ್ರಬಲವಾಗಿದೆ. ಇದು ಫ್ರಿಡ್ಜ್‌ನ ವಾಸನೆಯನ್ನು ಸುಲಭವಾಗಿ ತೆಗೆದುಹಾಕುತ್ತದೆ. ಕಾಫಿ ಬೀಜಗಳನ್ನು ರುಬ್ಬಿಕೊಳ್ಳಿ ಮತ್ತು ನಂತರ ಅದನ್ನು ಒಂದು ಪಾತ್ರೆಯಲ್ಲಿ ಹಾಕಿ ಫ್ರಿಡ್ಜ್‌ನಲ್ಲಿಡಿ. ಇದು ಫ್ರಿಡ್ಜ್‌ನ ವಾಸನೆಯನ್ನು ಹೋಗಲಾಡಿಸುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...