ಮಾರುಕಟ್ಟೆಯಿಂದ ತಂದ ಹಣ್ಣು, ತರಕಾರಿ ಸೇರೋದು ಫ್ರಿಜ್. ಉಳಿದ ಪದಾರ್ಥವೂ ಫ್ರಿಜ್ ನಲ್ಲೇ ಇರುತ್ತದೆ. ಡ್ರಿಂಕ್ಸ್ ಅದು, ಇದು ಅಂತಾ ಕೆಲವರ ಮನೆ ಫ್ರಿಜ್ ತುಂಬಿ ಹೋಗಿರುತ್ತದೆ.
ಆಹಾರ ತಾಜಾ ಆಗಿರಲು ಫ್ರಿಜ್ ಬಳಸಬೇಕು. ಹಾಗಂತ ಎಲ್ಲ ಪದಾರ್ಥವನ್ನೂ ಫ್ರಿಜ್ ನಲ್ಲಿ ಇಡೋಕೆ ಹೋಗಬೇಡಿ. ಕೆಲವೊಂದು ಆಹಾರವನ್ನು ಫ್ರಿಜ್ ನಲ್ಲಿ ಇಡಬಾರದು.
ಈರುಳ್ಳಿಯನ್ನು ಎಂದೂ ಫ್ರಿಜ್ ನಲ್ಲಿ ಇಡಬೇಡಿ. ಕಾಫಿಯನ್ನು ರೆಫ್ರಿಜರೇಟರ್ ನಲ್ಲಿ ಇಟ್ಟರೆ ಅದು ಸುವಾಸನೆ ಕಳೆದುಕೊಳ್ಳುತ್ತದೆ. ಆಲಿವ್ ಆಯಿಲನ್ನು ಕೂಡ ಫ್ರಿಜ್ ಒಳಗೆ ಇಡಬೇಡಿ.
ಜೇನುತುಪ್ಪವನ್ನು ಫ್ರಿಜ್ ನಲ್ಲಿ ಇಡುವ ಅವಶ್ಯಕತೆ ಇಲ್ಲ. ಹೊರಗಡೆ ಇಡಬಹುದು. ಮುಚ್ಚಳವನ್ನು ಮಾತ್ರ ಬಿಗಿಯಾಗಿ ಹಾಕಬೇಕು. ಫ್ರಿಜ್ ನಲ್ಲಿಟ್ಟು ಬೆಳ್ಳುಳ್ಳಿಯನ್ನು ಸೇವಿಸಬೇಡಿ. ಬ್ರೆಡ್ ಫ್ರಿಜ್ ನಲ್ಲಿಟ್ಟರೆ ಒಣಗಿ ಹೋಗುತ್ತದೆ. ಆಲೂಗಡ್ಡೆಯನ್ನೂ ಫ್ರಿಜ್ ನಲ್ಲಿ ಇಡಬೇಡಿ.