
ಹೈಹೀಲ್ಸ್ ಫ್ಯಾಷನ್ ಹೊಸದೇನಲ್ಲ. ಎಲ್ಲಾ ವಯಸ್ಸಿನ ಮಹಿಳೆಯರೂ ಹೈಹೀಲ್ಸ್ ಧರಿಸಲು ಇಷ್ಟಪಡುತ್ತಾರೆ. ಈ ಪಾದರಕ್ಷೆಯು ಅವರ ಲುಕ್ ಅನ್ನು ಇನ್ನಷ್ಟು ಸೊಗಸಾಗಿಸುತ್ತದೆ. ಕೆಲವರು ತಮ್ಮ ಎತ್ತರ ಕಡಿಮೆ ಎಂಬ ಕಾರಣಕ್ಕಾಗಿ ಹೈಹೀಲ್ಸ್ ಹಾಕಿಕೊಳ್ತಾರೆ. ಹೈ ಹೀಲ್ಸ್ ಫ್ಯಾಷನ್‌ಗೆ ಹೇಳಿ ಮಾಡಿಸಿದಂತಿದ್ದರೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಹೈಹೀಲ್ಸ್ ಧರಿಸುವುದರಿಂದ ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳು ಉದ್ಭವಿಸಬಹುದು.
ಹೈ ಹೀಲ್ಸ್ ಧರಿಸುವುದರಿಂದಾಗುವ ಅನಾನುಕೂಲಗಳು
ಕಾಲು ನೋವು – ಮಹಿಳೆಯರು ಸಾಮಾನ್ಯವಾಗಿ ಹೈ ಹೀಲ್ಸ್ ಧರಿಸಿ ಪಾರ್ಟಿಗಳಿಗೆ ಹೋಗುತ್ತಾರೆ. ಆದರೆ ಅವುಗಳನ್ನು ದೀರ್ಘಕಾಲದವರೆಗೆ ಧರಿಸುವುದರಿಂದ ಕಾಲು ನೋವು ಉಂಟಾಗುತ್ತದೆ. ವಾಸ್ತವವಾಗಿ ಈ ಪಾದರಕ್ಷೆಯು ಕಾಲಿನ ಸ್ನಾಯುಗಳಲ್ಲಿ ಒತ್ತಡವನ್ನು ಉಂಟುಮಾಡುತ್ತದೆ. ಇದು ಸೊಂಟ ಮತ್ತು ಮೊಣಕಾಲುಗಳಲ್ಲಿನ ಒತ್ತಡವನ್ನೂ ಹೆಚ್ಚಿಸುತ್ತದೆ. ಆದ್ದರಿಂದ ಫ್ಲಾಟ್ ಶೂಗಳು ಅಥವಾ ಸ್ಯಾಂಡಲ್ಗಳನ್ನು ಧರಿಸಿ.
ಮೂಳೆ ಮುರಿತ – ದೀರ್ಘಕಾಲದವರೆಗೆ ಹೀಲ್ಸ್ ಧರಿಸಿದರೆ ಸೊಂಟದ ಮೂಳೆಗಳು ದುರ್ಬಲವಾಗುತ್ತವೆ. ಕಾಲು ಮತ್ತು ಸೊಂಟದ ಮೂಳೆಯ ಮೇಲೆ ಹೆಚ್ಚುವರಿ ಒತ್ತಡದಿಂದಾಗಿ ಅವು ಮುರಿಯಬಹುದು.
ಕೀಲು ನೋವು– ಅನೇಕ ಮಹಿಳೆಯರು ನಿಯಮಿತವಾಗಿ ಹೈಹೀಲ್ಸ್ ಧರಿಸುತ್ತಾರೆ, ಇದರಿಂದಾಗಿ ಮೊಣಕಾಲು ನೋವನ್ನು ಎದುರಿಸುತ್ತಾರೆ. ಏಕೆಂದರೆ ಈ ಪಾದರಕ್ಷೆಗಳು ನಮ್ಮ ಕೀಲುಗಳ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತವೆ, ಇದರಿಂದಾಗಿ ನೋವು ಹೆಚ್ಚಾಗುತ್ತದೆ.
ದೇಹದ ಭಂಗಿಯ ಮೇಲೆ ಪರಿಣಾಮ – ಹೈ ಹೀಲ್ಸ್ ಹಾಕಿಕೊಳ್ಳುವುದು ಎಲ್ಲಾ ರೀತಿಯಲ್ಲೂ ಹಾನಿಕಾರಕ. ಈ ಹವ್ಯಾಸವನ್ನು ಎಷ್ಟು ಬೇಗನೆ ಬಿಡುತ್ತೀರೋ ಅಷ್ಟು ಒಳ್ಳೆಯದು. ಹೈ ಹೀಲ್ಸ್ ಹಾಕಿಕೊಳ್ಳುವುದರಿಂದ ನಮ್ಮ ದೇಹದ ಭಂಗಿಯೇ ಹಾಳಾಗಿ ಹೋಗುವ ಸಾಧ್ಯತೆ ಇರುತ್ತದೆ.