alex Certify ‘ಫ್ಯಾಮಿಲಿ ಮ್ಯಾನ್’ ವೆಬ್ ಸೀರೀಸ್ ಖ್ಯಾತಿಯ ‘ಚೆಲ್ಲಂ ಸರ್’ ಮರಳಿ ನಿರ್ದೇಶನಕ್ಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಫ್ಯಾಮಿಲಿ ಮ್ಯಾನ್’ ವೆಬ್ ಸೀರೀಸ್ ಖ್ಯಾತಿಯ ‘ಚೆಲ್ಲಂ ಸರ್’ ಮರಳಿ ನಿರ್ದೇಶನಕ್ಕೆ

ಅಮೆಜಾನ್ ಪ್ರೈಮ್‌ನಲ್ಲಿ ಇರುವ ಫ್ಯಾಮಿಲಿ ಮ್ಯಾನ್ ಸೀಸನ್ 2 ವೆಬ್ ಸೀರೀಸ್ ನಲ್ಲಿ ಚೆಲ್ಲಂ ಸರ್ ಆಗಿ ಕಾಣಿಸಿಕೊಂಡಿದ್ದ ವ್ಯಕ್ತಿ ಕುರಿತು ನಿಮಗೆ ತಿಳಿದಿರಬಹುದು. ಇವರನ್ನು ವೆಬ್ ಸೀರೀಸ್ ನ ಗೂಗಲ್ ಇದ್ದಂತೆ ಎಂದು ವೀಕ್ಷಕರು ತಮಾಷೆ ಮಾಡುತ್ತಿದ್ದರು.

ಚಲ್ಲಂ ಪಾತ್ರಧಾರಿ ಉದಯ ಮಹೇಶ್ ಮೂಲತಃ ತಮಿಳು ಚಿತ್ರರಂಗದ ನಿರ್ದೇಶಕರಾಗಿದ್ದು, ಆದರೆ 2008ರ ಬಳಿಕ ಯಾವುದೇ ಚಿತ್ರವನ್ನು ನಿರ್ದೇಶಿಸಿರಲಿಲ್ಲ. ಈ ಸಂದರ್ಭದಲ್ಲಿ ಹಲವು ಚಿತ್ರಗಳಲ್ಲಿ ಪೋಷಕ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದು, ಫ್ಯಾಮಿಲಿ ಮ್ಯಾನ್ ಸೀರೀಸ್ ನ ಚಲಂ ಪಾತ್ರ ಅವರನ್ನು ಮತ್ತಷ್ಟು ಖ್ಯಾತರನ್ನಾಗಿಸಿತ್ತು.

ಇದೀಗ ಉದಯ ಮಹೇಶ್ ಮತ್ತೊಮ್ಮೆ ನಿರ್ದೇಶನಕ್ಕೆ ಮರಳಿದ್ದು, ಜಿ.ವಿ. ಪ್ರಕಾಶ್ ನಾಯಕನಟನಾಗಿ ನಟಿಸುತ್ತಿರುವ ಸಿನಿಮಾವನ್ನು ಅವರು ಆಕ್ಷನ್ ಕಟ್ ಹೇಳಲಿದ್ದಾರೆ. ಚಿತ್ರದ ಚಿತ್ರೀಕರಣ ಈಗಾಗಲೇ ಆರಂಭವಾಗಿದ್ದು, ಇದೊಂದು ಫ್ಯಾಮಿಲಿ ಡ್ರಾಮಾ ಕಥೆ ಹೊಂದಿರುವ ಚಿತ್ರ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...