alex Certify ಫೋನ್ ಅನ್ನು ಟಾಯ್ಲೆಟ್‌ಗೆ ತೆಗೆದುಕೊಂಡು ಹೋಗುವ ಅಭ್ಯಾಸವಿದ್ದರೆ ಬಿಟ್ಟುಬಿಡಿ….! ಶಾಕಿಂಗ್‌ ಆಗಿದೆ ಅದರ ದುಷ್ಪರಿಣಾಮ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೋನ್ ಅನ್ನು ಟಾಯ್ಲೆಟ್‌ಗೆ ತೆಗೆದುಕೊಂಡು ಹೋಗುವ ಅಭ್ಯಾಸವಿದ್ದರೆ ಬಿಟ್ಟುಬಿಡಿ….! ಶಾಕಿಂಗ್‌ ಆಗಿದೆ ಅದರ ದುಷ್ಪರಿಣಾಮ…..!

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಮೊಬೈಲ್‌ ಅನ್ನು ನಾವು ಬಹುತೇಕ ಎಲ್ಲದಕ್ಕೂ ಬಳಸುತ್ತೇವೆ. ಕೆಲವರು ಟಾಯ್ಲೆಟ್‌ಗೆ ಹೋಗುವಾಗಲೂ ಕೈಯ್ಯಲ್ಲಿ ಮೊಬೈಲ್‌ ಹಿಡಿದುಕೊಂಡೇ ಹೋಗುತ್ತಾರೆ. ಆದರೆ ಈ ಅಭ್ಯಾಸ ಆರೋಗ್ಯಕ್ಕೆ ಹಾನಿಕರ.  

ಬ್ಯಾಕ್ಟೀರಿಯಾದ ಮೂಲ: ಫೋನ್ ಅನ್ನು ಶೌಚಾಲಯದೊಳಕ್ಕೆ ಕೊಂಡೊಯ್ದರೆ ಬ್ಯಾಕ್ಟೀರಿಯಾಕ್ಕೆ ಹೊಸ ಮನೆ ಮಾಡಿಕೊಟ್ಟಂತಾಗುತ್ತದೆ. ಟಾಯ್ಲೆಟ್‌ನಲ್ಲಿರುವ ಬ್ಯಾಕ್ಟೀರಿಯಾಗಳು ಫೋನ್‌ನ ಮೇಲ್ಮೈಯಲ್ಲಿ ಸಂಗ್ರಹವಾಗುತ್ತವೆ. ನಂತರ ಕೈಗಳು, ಮುಖ ಮತ್ತು ಇತರ ಅಂಗಗಳಿಗೆ ವರ್ಗಾವಣೆಯಾಗಿ, ಹೊಟ್ಟೆ ಸೇರುತ್ತವೆ. ಇದು ವಿವಿಧ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.

ವೈಯಕ್ತಿಕ ಸಮಯದ ನಷ್ಟ: ಟಾಯ್ಲೆಟ್‌ನಲ್ಲಿ ಕೂರುವಷ್ಟು ಸಮಯವನ್ನು ನಮಗಾಗಿ ಮೀಸಲಿಟ್ಟುಕೊಳ್ಳಬೇಕು. ಇದನ್ನು ಶಾಂತವಾಗಿ ಆತ್ಮಾವಲೋಕನಕ್ಕಾಗಿ ಬಳಸಬಹುದು. ಆದರೆ ಈ ಸಮಯದಲ್ಲಿ ಫೋನ್ ಬಳಸಿದರೆ ಅದು ವೈಯಕ್ತಿಕ ಸಮಯವನ್ನು ಹಾಳು ಮಾಡುತ್ತದೆ.  

ಹೊರಗಿನ ಪ್ರಪಂಚದೊಂದಿಗೆ ಹೆಚ್ಚಿನ ಸಂಪರ್ಕ: ಟಾಯ್ಲೆಟ್‌ನಲ್ಲಿ ಫೋನ್ ಬಳಸುವುದರಿಂದ ಹೊರಗಿನ ಪ್ರಪಂಚದೊಂದಿಗೆ ಹೆಚ್ಚಿನ ಸಂಪರ್ಕದ ಸ್ಥಿತಿಯಲ್ಲಿರುತ್ತೀರಿ. ಇದು ಒತ್ತಡದ ಮಟ್ಟವನ್ನು ಹೆಚ್ಚಿಸಬಹುದು ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

ಫೋನ್ ಅನ್ನು ಶೌಚಾಲಯಕ್ಕೆ ಕೊಂಡೊಯ್ಯುವುದನ್ನು ತಪ್ಪಿಸಲು ಡಿಜಿಟಲ್ ಡಿಟಾಕ್ಸ್ ಮಾಡಬಹುದು. ಬ್ಯಾಕ್ಟೀರಿಯಾ ಹರಡುವುದನ್ನು ತಡೆಯಲು ಫೋನ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ. ಯಾಕಂದ್ರೆ ಆರೋಗ್ಯವು ದೊಡ್ಡ ಸಂಪತ್ತು, ಅದನ್ನು ಕಾಪಾಡಿಕೊಳ್ಳಲು ಸರ್ವಪ್ರಯತ್ನ ಮಾಡುವುದು ಅವಶ್ಯಕ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...