ಡಿಜಿಟಲ್ ಪೇಮೆಂಟ್ ಪ್ಲಾಟ್‌ಫಾರ್ಮ್ ಫೋನ್ ಪೇ ತನ್ನ ಮಾಜಿ ಉದ್ಯೋಗಿಗಳ ವಿರುದ್ಧವೇ ಕಾನೂನು ಸಮರಕ್ಕಿಳಿದಿದೆ. ಜುಲೈ 28 ರಂದು ಗ್ರೇಟರ್ ನೋಯ್ಡಾದಲ್ಲಿ ಕ್ಯೂಆರ್ ಕೋಡ್‌ಗಳನ್ನು ಬರ್ನ್ ಮಾಡಿದ ಆರೋಪದ ಮೇಲೆ ಮಾಜಿ ಉದ್ಯೋಗಿಗಳ ವಿರುದ್ಧ ಪ್ರಕರಣ ದಾಖಲಿಸಿದೆ.
ಈ ಕೃತ್ಯಕ್ಕೆ ಕಾರಣರಾದ ಕೆಲವು ಉದ್ಯೋಗಿಗಳು ಈ ವರ್ಷದ ಆರಂಭದಲ್ಲಿ Paytm ಕಂಪನಿ ಸೇರಿದ್ದಾರಂತೆ. ಈ ಘಟನೆಗೆ ಫೋನ್‌ಪೇ ಜೊತೆಗಿನ ವೈಯಕ್ತಿಕ ದ್ವೇಷವೇ ಕಾರಣ ಅಂತಾ ಹೇಳಲಾಗ್ತಿದೆ. ಇದಕ್ಕೂ ಪೇಟಿಎಂಗೂ ಯಾವ ಸಂಬಂಧವೂ ಇಲ್ಲವೆಂದು ಕಂಪನಿ ಸ್ಪಷ್ಟನೆ ನೀಡಿದೆ. Paytm ಕೂಡ ಈ ಘಟನೆಯಲ್ಲಿ ತನ್ನ ಪಾತ್ರವೇನೂ ಇಲ್ಲವೆಂದು ಹೇಳಿದೆ. ಈ ಕೃತ್ಯವನ್ನು ಖಂಡಿಸಿರುವ ಪೇಟಿಎಂ, ಆ ಉದ್ಯೋಗಿಗಳನ್ನು ಅಮಾನತುಗೊಳಿಸಿದೆ.
ಈ ವಿಚಾರ PhonePe ಮತ್ತದರ ಮಾಜಿ ಉದ್ಯೋಗಿಗಳ ನಡುವೆ ಇರುವಂಥದ್ದು. ಈ ಕೃತ್ಯ ಸಮರ್ಥನೀಯವಲ್ಲ, ಇದು ಅವರು ಮಾಡಿರುವ ಪ್ರಮಾದ. ಈಗಾಗಲೇ ವಿವರವಾದ ತನಿಖೆಗಾಗಿ ಉದ್ಯೋಗಿಗಳನ್ನು ಕಂಪನಿಯಿಂದ ಅಮಾನತು ಮಾಡಲಾಗಿದೆ ಎಂದು Paytm ಹೇಳಿದೆ. ಅಷ್ಟೇ ಅಲ್ಲ ಇಂತಹ ಯಾವುದೇ ದುಷ್ಕೃತ್ಯವನ್ನು ಸಹಿಸುವುದಿಲ್ಲ. Paytm ದೇಶದಲ್ಲಿ QR ಕೋಡ್ ಪಾವತಿಗಳ ಪ್ರವರ್ತಕ ಎನಿಸಿಕೊಂಡಿದೆ. ಭಾರತದ ಡಿಜಿಟಲ್ ವ್ಯವಸ್ಥೆಯ ಬೆಳವಣಿಗೆಗೆ ಪೇಟಿಎಂ ಗಣನೀಯ ಕೊಡುಗೆ ನೀಡಿದೆ ಅಂತಾ ಕಂಪನಿ ಹೇಳಿಕೊಂಡಿದೆ.