
ಹೌದು, ಆಫ್ರಿಕನ್ ಆನೆಯೊಂದು ಕೋಪಗೊಂಡು ತನ್ನ ಸೊಂಡಿಲಿನಿಂದ ಯುವತಿಯ ಮುಖಕ್ಕೆ ಬಲವಾಗಿ ಹೊಡೆಯುತ್ತಿರುವ ವಿಡಿಯೋ ಇಂಟರ್ನೆಟ್ನಲ್ಲಿ ಮರುಕಳಿಸಿದೆ. ಯುವತಿಯು ಆನೆಯ ಚಿತ್ರವನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಂತೆ ಜಂಬೋ ಸ್ವಲ್ಪ ಸಿಟ್ಟಿಗೆದ್ದಂತೆ ತೋರಿದೆ.
ಆನೆಯ ಆವರಣದ ಹೊರಗೆ ಜನರ ಗುಂಪು ನಿಂತಿದ್ದು, ಕೆಲವರು ಅದರ ಸೊಂಡಿಲನ್ನು ಮುಟ್ಟಲು ಪ್ರಯತ್ನಿಸುತ್ತಿರುವುದನ್ನು ಮತ್ತು ಅದರೊಂದಿಗೆ ಆಟವಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಯುವತಿಯೊಬ್ಬಳು ತನ್ನ ಮೊಬೈಲ್ ಫೋನ್ ನಲ್ಲಿ ಆನೆಯ ಚಿತ್ರವನ್ನು ಕ್ಲಿಕ್ ಮಾಡುವವರೆಗೂ ಅದು ನಿಜವಾಗಿಯೂ ಶಾಂತವಾಗಿರುವಂತೆ ತೋರುತ್ತದೆ. ಆದರೆ, ಕೆಲವೇ ಸೆಕೆಂಡುಗಳಲ್ಲಿ ಆನೆ ಆಕ್ರಮಣಕಾರಿಯಾಗಿ ತಿರುಗುತ್ತದೆ. ತನ್ನ ಸೊಂಡಿಲಿನಿಂದ ಯುವತಿಯ ಮುಖಕ್ಕೆ ರಪ್ ಅಂತಾ ಬಾರಿಸಿ ಕೆಳಗೆ ಬೀಳಿಸಿದೆ. ಯುವತಿ ಕೆಳಗೆ ಬೀಳುತ್ತಿದ್ದಂತೆ, ಇತರರು ಅವಳನ್ನು ಎತ್ತಿಕೊಳ್ಳಲು ಪ್ರಯತ್ನಿಸುತ್ತಾರೆ. ಅಷ್ಟರಲ್ಲಿ ಆನೆ ತನ್ನ ಸೊಂಡಿಲಿನಿಂದ ಫೋನ್ ತೆಗೆದುಕೊಳ್ಳಲು ಪ್ರಯತ್ನಿಸುತ್ತದೆ.
ಈ ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದೆ. ಇನ್ನು ಘಟನೆಯ ಬಗ್ಗೆ ಮಾತನಾಡಿದ ಯುವತಿ, ಆನೆಯು ತನಗೆ ಬಡಿದಾಗ ಯಾರೋ 10 ಜನರು ಒಮ್ಮೆಲೇ ತನ್ನನ್ನು ಹೊಡೆದಂತೆ ಭಾಸವಾಗಿದೆ. ಆದರೆ, ತನಗೇನು ನೋವುಂಟಾಗಿಲ್ಲ, ತಾನು ಚೆನ್ನಾಗಿದ್ದೇನೆ ಎಂದು ತಿಳಿಸಿದ್ದಾಳೆ. ಅಲ್ಲದೆ ತಾನು ಆನೆಗಳನ್ನು ಪ್ರೀತಿಸುವುದಾಗಿ ಹೇಳಿದ್ದಾಳೆ.