![How To Use Face Pack The Right Way?](https://www.fashionlady.in/wp-content/uploads/2015/11/how-to-apply-face-pack-1280x720.jpg)
ಮುಖಕ್ಕೆ ಮಾಸ್ಕ್ ಹಾಕಿಕೊಳ್ಳುವುದು ಬಹುತೇಕರು ಇಷ್ಟಪಡುತ್ತಾರೆ. ಕೆಲವರು ಮನೆಯಲ್ಲೇ ಹಣ್ಣು ತರಕಾರಿಗಳ ಮಾಸ್ಕ್ ಹಾಕಿ ಮುಖಕ್ಕೆ ಹೊಳಪು ಪಡೆದುಕೊಂಡರೆ ಮತ್ತೆ ಕೆಲವರು ಪಾರ್ಲರ್ ನಲ್ಲಿ ಫೇಸ್ ಮಾಸ್ಕ್ ಮಾಡಿಕೊಳ್ಳುತ್ತಾರೆ.
ಇದರಿಂದ ಮುಖದಲ್ಲಿರುವ ಜಿಡ್ಡು ಅಥವಾ ಕೊಳೆ ದೂರವಾಗುತ್ತದೆ ಎಂಬುದೇನೋ ನಿಜ. ಆದರೆ ಫೇಸ್ ಮಾಸ್ಕ್ ಮಾಡಿಕೊಳ್ಳುವ ಮುನ್ನ ಮುಖವನ್ನು ಸ್ವಚ್ಛವಾಗಿ ತೊಳೆಯುವುದು ಬಹಳ ಮುಖ್ಯ. ಐಸ್ ನಿಂದ ಮಸಾಜ್ ಮಾಡಿಕೊಳ್ಳುವುದು ಒಳ್ಳೆಯದು.
ಹಬೆಯ ಮೂಲಕ ತ್ವಚೆಯ ಕೊಳೆಯನ್ನು ದೂರ ಮಾಡುವ ವಿಧಾನವನ್ನು ಹೆಚ್ಚಿನ ಪಾರ್ಲರ್ ಗಳಲ್ಲಿ ಅನುಸರಿಸುತ್ತಾರೆ. ಕನಿಷ್ಟ ಹತ್ತು ನಿಮಿಷಗಳ ಕಾಲ ಮುಖವನ್ನು ಹಬೆಯ ಹೊಗೆಗೆ ಒಡ್ಡಿಕೊಂಡಾಗ ತ್ವಚೆಯ ರಂಧ್ರಗಳು ತೆರೆದುಕೊಂಡು ಸುಲಭವಾಗಿ ವಿಷಕಾರಿ ಅಂಶಗಳು ಹೊರಹೋಗುತ್ತವೆ.
ಫೇಸ್ ಮಾಸ್ಕ್ ಮಾಡಿ ಮೃದುವಾದ ಬಟ್ಟೆಯಲ್ಲಿ ಅದನ್ನು ಒತ್ತಿ ತೆಗೆದ ಬಳಿಕ ಅಥವಾ ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದುಕೊಂಡ ಬಳಿಕ ಮುಖಕ್ಕೆ ಮಾಯಿಸ್ಚರೈಸರ್ ಮಾಡುವುದು ಬಹಳ ಮುಖ್ಯ. ಉತ್ತಮ ಗುಣಮಟ್ಟದ ಫೇಸ್ ಕ್ರೀಮ್ ಅನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖದಲ್ಲಿ ತೇವಾಂಶವೂ ಉಳಿಯುತ್ತದೆ, ಆಕರ್ಷಣೀಯವಾಗಿಯೂ ಕಾಣಿಸುತ್ತದೆ.