ಜನಪ್ರಿಯ ಆಪ್ ಗಳ ಮೂಲಕ ನಿಮ್ಮ ಫೇಸ್ ಬುಕ್ ಪಾಸ್ ವರ್ಡ್ ಮತ್ತು ಯೂಸರ್ ನೇಮ್ ಕದಿಯುವ ಕೆಲಸ ಆಗುತ್ತಿದೆ. ಇಂಥಹದೊಂದು ವಿಚಾರವನ್ನು ಫೇಸ್‌ಬುಕ್ ಒಡೆತನದ ಮೆಟಾ ಸಂಸ್ಥೆ ಹೇಳಿದೆ. ಈ ಸಂಸ್ಥೆ ಹೇಳಿರುವ ಪ್ರಕಾರ, ಈ ವರ್ಷ ಸುಮಾರು 10 ಲಕ್ಷ ಫೇಸ್‌ಬುಕ್ ಬಳಕೆದಾರರ ಯೂಸರ್‌ನೇಮ್, ಪಾಸ್‌ವರ್ಡ್‌ಗಳು ಸೋರಿಕೆಯಾಗಿದೆ ಎನ್ನಲಾಗಿದೆ.
ಹೌದು, ಫೋಟೋ ಎಡಿಟಿಂಗ್ ಆಪ್, ಆರೋಗ್ಯ ನಿಗಾ ಆಪ್, ಗೇಮ್ಸ್ ಆಪ್ ಹೀಗೆ ಅನೇಕ ಅತ್ಯಾಕರ್ಷಕ ಆ್ಯಪ್ ಮೂಲಕ ನಿಮ್ಮ ಮಾಹಿತಿಗಳು ಖದೀಮರ ಪಾಲಾಗುತ್ತವೆ. ಇಂಥಹ ಸುಮಾರು 400 ಆ್ಯಪ್ ಗಳು ಹೀಗೆ ಮಾಹಿತಿ ಕದಿಯುವ ಆ್ಯಪ್ ಗಳಾಗಿವೆಯಂತೆ. ಸದ್ಯ ಇಂಥಹ ಆ್ಯಪ್ ಗಳು ಆ್ಯಂಡ್ರಾಯ್ಡ್ ಮತ್ತು ಐಒಎಸ್ ಗಳಲ್ಲಿ ಇದ್ದು, ಇವುಗಳನ್ನು ಫೇಸ್‌ಬುಕ್ ಗುರುತಿಸಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಗೂಗಲ್ ಮತ್ತು ಆ್ಯಪಲ್‌ಗೆ ಫೇಸ್‌ಬುಕ್ ಸೂಚಿಸಿದೆ.
ಇಂಥಹ ಆಪ್ ಗಳಿಂದ ರಕ್ಷಣೆ ಬೇಕು ಎಂದರೆ ನಿಮ್ಮ ಪಾಸ್ ವರ್ಡ್ ಗಳನ್ನು ಆಗಾಗ ಬದಲಾಯಿಸಬೇಕು. ಜೊತೆಗೆ ತುಂಬಾ ಸ್ಟ್ರಾಂಗ್ ಇರುವ ಪಾಸ್ ವರ್ಡ್ ಇಟ್ಟುಕೊಳ್ಳಿ. ಆಗಾಗ ಮೊಬೈಲ್ ಅಪ್ಡೇಟ್ ಕೊಡುವುದು ಒಳ್ಳೆಯದು. ಅನಾವಶ್ಯಕ ಆ್ಯಪ್ ಗಳಿಂದ ದೂರ ಇರೋದು ಒಳ್ಳೆಯದು. ಜೊತೆಗೆ ಒಂದಿಷ್ಟು ಆ್ಯಪ್ ಡೌನ್ ಲೋಡ್ ಮಾಡುವಾಗ ಫೇಸ್ ಬುಕ್ ಮೂಲಕ ಲಾಗಿನ್ ಆಗಿ ಎನ್ನುವ ಆಯ್ಕೆ ಬಂದಾಗ ಅಂತಹ ಆ್ಯಪ್ ಗಳಿಂದ ದೂರ ಇರಿ.