ವಾರಕ್ಕೆ ಒಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಫೇಸ್ ಪ್ಯಾಕ್ ಹಾಕಿಕೊಳ್ಳುವುದರಿಂದ ನಿಮ್ಮ ತ್ವಚೆಯ ಮೇಲಿರುವ ಸತ್ತ ಅಥವಾ ನಿರ್ಜೀವ ಜೀವಕೋಶಗಳು ದೂರವಾಗುತ್ತದೆ.
ತ್ವಚೆಗೆ ನೈಸರ್ಗಿಕವಾದ ಸೌಂದರ್ಯ ಸಿಗುತ್ತದೆ. ಆದರೆ ಫೇಸ್ ಪ್ಯಾಕ್ ಎಷ್ಟು ಹೊತ್ತು ಮುಖದ ಮೇಲಿರಬೇಕು ಎಂಬುದು ಬಹಳ ಮುಖ್ಯ.
ಡೇ ಕ್ರೀಮ್ ಅಥವಾ ನೈಟ್ ಕ್ರೀಮ್ ಬಳಸಿ ಫೇಸ್ ಕ್ರೀಮ್ ಹಾಕಿಕೊಂಡರೆ ಅದನ್ನು ಅರ್ಧ ಗಂಟೆಯೊಳಗೆ ತೆಗೆಯುವುದು ಬಹಳ ಮುಖ್ಯ. ಫೇಸ್ ಮಾಸ್ಕ್ ಹೆಚ್ಚು ಹೊತ್ತು ಇಟ್ಟರೆ ತ್ವಚೆಯ ರಂಧ್ರಗಳಿಗೆ ಉಸಿರಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಮೊಡವೆಗಳು ಹೆಚ್ಚಬಹುದು.
ಯಾವುದೇ ಫೇಸ್ ಪ್ಯಾಕ್ ಬಳಸುವ ಮುನ್ನ ಅದನ್ನು ಮುಖದಲ್ಲಿಡಬೇಕಾದ ಅವಧಿಯನ್ನೂ ಗಮನಿಸಿಕೊಳ್ಳಿ. ಫೇಸ್ ಪ್ಯಾಕ್ ಹೆಚ್ಚು ಹೊತ್ತು ಮುಖದ ಮೇಲೆ ಇರುವುದರಿಂದ ಮಾಯಿಸ್ಚರೈಸರ್ ಕಡಿಮೆಯಾಗುತ್ತದೆ. ಇದರಿಂದ ನೀವು ಫೇಸ್ ಪ್ಯಾಕ್ ಬಳಸಿಯೂ ಉಪಯೋಗವಿಲ್ಲವೆಂದಾದೀತು.
ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಫೇಸ್ ಪ್ಯಾಕ್ ಹಾಕಿಕೊಂಡರೆ ಸಾಕು. ನಿತ್ಯ ಸ್ಕ್ರಬ್ಬರ್ ಬಳಸುವುದರಿಂದ ತ್ವಚೆ ಹಾಳಾಗುವುದೇ ಹೆಚ್ಚು. ಸಾಧ್ಯವಾದಷ್ಟು ನೈಸರ್ಗಿಕ ಫೇಸ್ ಪ್ಯಾಕ್ ಅಂದರೆ ಮೊಟ್ಟೆಯ ಬಿಳಿ ಭಾಗ, ಮೊಸರು, ಓಟ್ಸ್, ಜೇನು ಮೊದಲಾದ ನೈಸರ್ಗಿಕ ಉತ್ಪನ್ನಗಳನ್ನೇ ಬಳಸಿ.