ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಹಣ್ಣುಗಳಲ್ಲಿ ಅನೇಕ ವಿಟಮಿನ್‌ಗಳು ಮತ್ತು ಖನಿಜಗಳು ಇರುತ್ತವೆ. ಹಣ್ಣುಗಳು ನಮ್ಮ ವ್ಯಕ್ತಿತ್ವದ ಬಗ್ಗೆಯೂ ಹೇಳುತ್ತವೆ. ನಮಗಿಷ್ಟವಾದ ಹಣ್ಣು ನಮ್ಮ ವ್ಯಕ್ತಿತ್ವವನ್ನು ಬಿಚ್ಚಿಡುತ್ತದೆ. ನಮ್ಮ ನಡವಳಿಕೆಯ ಬಗ್ಗೆ ಆಳವಾದ ಮಾಹಿತಿಯನ್ನು ನೀಡುತ್ತದೆ. ಅವರ ನೆಚ್ಚಿನ ಹಣ್ಣಿನ ಬಗ್ಗೆ ತಿಳಿದುಕೊಳ್ಳುವ ಮೂಲಕ ನಾವು ಜನರ ವ್ಯಕ್ತಿತ್ವವನ್ನು ಅಳೆಯಬಹುದು.
ಕಿತ್ತಳೆ: ಕಿತ್ತಳೆಯನ್ನು ಇಷ್ಟಪಡುವ ಜನರು ತಾಳ್ಮೆಯಿಂದಿರುತ್ತಾರೆ. ಇವರು ತುಂಬಾ ವಿಶ್ವಾಸಾರ್ಹರು. ನೆಚ್ಚಿನ ಹಣ್ಣು ಕಿತ್ತಳೆಯಾಗಿರುವ ಜನರು ಸುಳ್ಳು ಹೇಳಲು ಇಷ್ಟಪಡುವುದಿಲ್ಲ. ಅವರು ತುಂಬಾ ಗಂಭೀರ ಮತ್ತು ಚಿಂತನಶೀಲ ಸ್ವಭಾವದವರು. ಕಿತ್ತಳೆ ತಿನ್ನುವವರು ಯಾರಿಗೂ ದ್ರೋಹ ಮಾಡಲಾರರು.
ಮಾವು : ಮಾವಿನ ಹಣ್ಣನ್ನು ಇಷ್ಟಪಡುವವರ ಸ್ವಭಾವ ಹಠಮಾರಿ. ಈ ಜನರು ಚಿಂತನಶೀಲವಾಗಿ ವರ್ತಿಸುತ್ತಾರೆ. ಯಾವುದೇ ನಿರ್ಧಾರವನ್ನು ಎಲ್ಲಾ ಕಡೆ ಎಚ್ಚರಿಕೆಯಿಂದ ತೆಗೆದುಕೊಳ್ಳುತ್ತಾರೆ. ಹಠಮಾರಿಯಾದರೂ ತರ್ಕಬದ್ಧ ವಿಷಯಗಳನ್ನು ಇಷ್ಟಪಡುತ್ತಾರೆ.
ಸೇಬು: ಸೇಬು ಹಣ್ಣನ್ನು ಇಷ್ಟಪಡುವವರು ಯಾವಾಗಲೂ ಫಿಟ್ ಆಗಿರಲು ಬಯಸುತ್ತಾರೆ. ಅವರಿಗೆ ಜೀವನದಲ್ಲಿ ಶಿಸ್ತು ಬಹಳ ಮುಖ್ಯ. ಸೇಬನ್ನು ಇಷ್ಟಪಡುವವರು ಬಹಿರ್ಮುಖಿಗಳು. ಅವರು ಯಾರಿಂದಲೂ ದೂರ ಸರಿಯುವುದಿಲ್ಲ. ಎಲ್ಲಾ ಕೆಲಸವನ್ನೂ ಉತ್ಸಾಹದಿಂದ ಮಾಡುತ್ತಾರೆ. ಸದಾ ಖುಷಿಯಿಂದ ಇರುತ್ತಾರೆ.
ಪಿಯರ್: ಮರಸೇಬು ಪ್ರಿಯರು ತುಂಬಾ ಶಕ್ತಿವಂತರು. ಬೇಗನೆ ಚಂಚಲರಾಗುತ್ತಾರೆ. ಅವರು ಯಾವಾಗಲೂ ಒಂದೇ ಸ್ಥಳದಲ್ಲಿ ಉಳಿಯಲು ಸಾಧ್ಯವಿಲ್ಲ. ಮರಸೇಬು ಹಣ್ಣನ್ನು ಇಷ್ಟಪಡುವವರು ಸುಲಭವಾಗಿ ಕೋಪಗೊಳ್ಳುತ್ತಾರೆ. ಕೋಪ ಮತ್ತು ಚೈತನ್ಯದ ಜೊತೆಗೆ ಹರ್ಷಚಿತ್ತದಿಂದಲೂ ಇರುತ್ತಾದೆ.
ಬಾಳೆಹಣ್ಣು: ಬಾಳೆಹಣ್ಣನ್ನು ಇಷ್ಟಪಡುವ ಜನರು ಅತಿಯಾದ ಸೂಕ್ಷ್ಮತೆ ಹೊಂದಿರುತ್ತಾರೆ. ಒಳ್ಳೆಯತನದಿಂದಾಗಿ ಅವರೇ ತೊಂದರೆಗೆ ಸಿಲುಕುತ್ತಾರೆ. ಇವರು ನಿಷ್ಠಾವಂತರು, ತುಂಬು ಹೃದಯದಿಂದ ಇತರರನ್ನು ಬೆಂಬಲಿಸುತ್ತಾರೆ. ನಂಬಿಕೆಗೆ ದ್ರೋಹ ಮಾಡುವುದಿಲ್ಲ. ಆದರೆ ಅವರಲ್ಲಿ ಆತ್ಮವಿಶ್ವಾಸದ ಕೊರತೆ ಇರುತ್ತದೆ. ತಪ್ಪುಗಳನ್ನು ಪುನರಾವರ್ತಿಸುವುದಿಲ್ಲ, ತಿದ್ದಿಕೊಳ್ಳುತ್ತಾರೆ.
ಚೆರ್ರಿ: ಚೆರ್ರಿಯನ್ನು ಇಷ್ಟಪಡುವವರು ಅಂತರ್ಮುಖಿ ಸ್ವಭಾವದವರು. ತುಂಬಾ ನಾಚಿಕೆ ಸ್ವಭಾವ ಹೊಂದಿರುತ್ತಾರೆ. ತಮ್ಮ ಬಗ್ಗೆ ಮುಕ್ತವಾಗಿ ಮಾತನಾಡಲು ಇಷ್ಟಪಡುವುದಿಲ್ಲ. ಚೆರ್ರಿಯನ್ನು ಇಷ್ಟಪಡುವವರ ಸ್ವಭಾವವು ತುಂಬಾ ಸರಳವಾಗಿದೆ. ಬೇಗ ಎಲ್ಲರನ್ನೂ ಕ್ಷಮಿಸುತ್ತಾರೆ, ಯಾರನ್ನೂ ಅನುಮಾನಿಸುವುದಿಲ್ಲ.
ಕಲ್ಲಂಗಡಿ: ಕಲ್ಲಂಗಡಿಯನ್ನು ಇಷ್ಟಪಡುವವರು ತುಂಬಾ ಶ್ರಮಜೀವಿಗಳಾಗಿರುತ್ತಾರೆ. ಇವರಲ್ಲಿ ಹೆಚ್ಚು ಸೃಜನಶೀಲತೆ ಇರುತ್ತದೆ. ಜೊತೆಗೆ ತುಂಬಾ ಬುದ್ಧಿವಂತರಾಗಿರುತ್ತಾರೆ.