ಮೊದಲೇ ಹೇಳಿದಂತೆ ಫೆಬ್ರವರಿ 24ರಂದು ಮಹಾಶಿವರಾತ್ರಿಯನ್ನು ಆಚರಿಸಲಾಗ್ತಾ ಇದೆ. ಶಿವರಾತ್ರಿಯಂದು ಜಾಗರಣೆ ಮಾಡಿ ಮಹಾಶಿವನನ್ನು ಹೇಗೆ ಒಲಿಸಿಕೊಳ್ಳಬೇಕೆನ್ನುವ ಬಗ್ಗೆ ಶಾಸ್ತ್ರದಲ್ಲಿ ವಿವರವಾಗಿ ಹೇಳಲಾಗಿದೆ. ಇದನ್ನು ಹೊರತುಪಡಿಸಿ ಕಚೇರಿ ಹಾಗೂ ಅಂಗಡಿಯಲ್ಲಿ ಮಾಡುವ ಸಣ್ಣಪುಟ್ಟ ಕೆಲಸಗಳು ಕೂಡ ಶಿವನ ಕೃಪೆಗೆ ಪಾತ್ರರಾಗಲು ನೆರವಾಗುತ್ತದೆ. ಆರ್ಥಿಕ ಸಮಸ್ಯೆಯನ್ನು ದೂರ ಮಾಡುತ್ತದೆ.
ಶಿವರಾತ್ರಿಯಂದು ಕಚೇರಿ ಅಥವಾ ಅಂಗಡಿಯ ಮುಖ್ಯ ದ್ವಾರದ ಮುಂದೆ ಓಂ ಅಥವಾ ಸ್ವಸ್ತಿಕ ಚಿಹ್ನೆಯನ್ನು ಕುಂಕುಮದಲ್ಲಿ ಬಿಡಿಸಿ. ವ್ಯಾಪಾರದ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ.
ನೀಲಿ ಬಣ್ಣದ ಹೂ ಶಿವನಿಗೆ ಪ್ರಿಯ. ಅಂಗಡಿ ಅಥವಾ ಕಚೇರಿಯ ಉತ್ತರ ದಿಕ್ಕಿಗೆ ನೀಲಿ ಹೂವನ್ನು ಇಡಿ.ಇದು ಗ್ರಾಹಕರನ್ನು ಆಕರ್ಷಿಸಲು ನೆರವಾಗುತ್ತದೆ.
ಏಕಮುಖಿ ರುದ್ರಾಕ್ಷಿಯನ್ನು ಕೆಂಪು ಬಟ್ಟೆ ಅಥವಾ ಡಬ್ಬದಲ್ಲಿ ತುಂಬಿ ಕಚೇರಿ ಅಥವಾ ಅಂಗಡಿ ಕಪಾಟಿನಲ್ಲಿಡಿ. ಆರ್ಥಿಕ ಸಮಸ್ಯೆ ಬಗೆಹರಿಯಲಿದೆ.
ನಂದಿ ಮೇಲಿರುವ ಶಿವ ಚಿತ್ರವನ್ನು ಅಂಗಡಿ ಅಥವಾ ಕಚೇರಿ ದೇವರ ಮನೆಯಲ್ಲಿಟ್ಟು ಪೂಜೆ ಮಾಡಿ.
ಶಂಕರನ ಆಶೀರ್ವಾದ ಪಡೆಯಲು ಆಗ್ನೇಯ ದಿಕ್ಕಿನಲ್ಲಿ ಲೋಹದ ಗಣೇಶ ಮೂರ್ತಿ, ಓಂ,ಸ್ವಸ್ತಿಕ್ ಅಥವಾ ಶಿವನ ಕುಟುಂಬವನ್ನು ಸ್ಥಾಪನೆ ಮಾಡಿ.