ಫೆರ್ರಿಸ್ ವ್ಹೀಲ್ ಸವಾರಿ ಮಾಡುವಾಗ ಬಾಲಕನೊಬ್ಬ ಚಡಪಡಿಸುತ್ತಿರುವ ಉಲ್ಲಾಸದ ವಿಡಿಯೋವೊಂದು ವೈರಲ್ ಆಗಿದೆ. ಗಿಡ್ಡೆ ಎಂಬ ಇನ್ಸ್ಟಾಗ್ರಾಮ್ ಪುಟದಿಂದ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.
ಜಾತ್ರೆ ಅಂದ ಮೇಲೆ ಉಯ್ಯಾಲೆಯಂತಹ ಆಟಗಳು ಎಂಟ್ರಿ ಕೊಟ್ಟಿರುತ್ತವೆ. ಅದರಲ್ಲಿ ಕೂತು ಆಡುವುದೆಂದರೆ ಮಕ್ಕಳಿಂದ ಹಿಡಿದು ದೊಡ್ಡವರು ಕೂಡ ಇಷ್ಟಪಡುತ್ತಾರೆ. ಹಾಗೆಯೇ ಮಹಾರಾಷ್ಟ್ರದ ಜಾತ್ರೆಯೊಂದರಲ್ಲಿ ಬಾಲಕನೊಬ್ಬ ಫೆರ್ರಿಸ್ ವ್ಹೀಲ್ ಸವಾರಿ ಮಾಡಿದ್ದಾನೆ. ಮೊದಲಿಗೆ ಆತ ಬಹಳ ಉತ್ಸುಕನಾಗಿದ್ದನು. ಫೆರ್ರಿಸ್ ಚಕ್ರವು ನಿಧಾನವಾಗಿ ತಿರುಗಲು ಪ್ರಾರಂಭಿಸಿದಾಗ, ಬಾಲಕ ಬಹಳ ಖುಷಿಯಿಂದ ತೇಲಾಡಿದ್ದಾನೆ.
ಸವಾರಿ ವೇಗವಾಗಿ ಹೋಗಲು ಪ್ರಾರಂಭಿಸಿದಾಗ ಬಾಲಕ ಭೀತಿಗೊಂಡಿದ್ದಾನೆ. ಭಯದಿಂದಲೇ ಕೂಗುತ್ತಾ ದೇವರ ಜಪ ಮಾಡಿದ್ದಾನೆ. ಜೈ ಮಹಾರಾಷ್ಟ್ರ, ಹರ ಹರ ಮಹಾದೇವ…… ಜೈ ಭಜರಂಗ ಬಲಿ ಅಂತೆಲ್ಲಾ ಹೇಳಿದ್ದಾನೆ. ಅಷ್ಟೇ ಅಲ್ಲದೆ ಅಪ್ಪ, ಅಮ್ಮ ಹಾಗೂ ತನ್ನ ಕುಟುಂಬದ ಸದಸ್ಯರ ಹೆಸರು ಹೇಳುತ್ತಾ ಕೂಗುತ್ತಾ ಅಳಲು ಶುರು ಮಾಡಿದ್ದಾನೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ನೆಟ್ಟಿಗರನ್ನು ಸಂಪೂರ್ಣವಾಗಿ ರಂಜಿಸಿದೆ. ಕಾಮೆಂಟ್ ವಿಭಾಗವು ನಗುವಿನ ಎಮೋಜಿಯಿಂದ ತುಂಬಿದೆ.
https://youtu.be/nz2puyv82sk