
‘ಬಜಾರ್’ ಸಿನಿಮಾ ಖ್ಯಾತಿಯ ಧನ್ವೀರ್ ಗೌಡ ನಟನೆಯ ‘ಬೈ2 ಲವ್’ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಈ ಚಿತ್ರದ ಟೈಟಲ್ ಸಾಂಗ್ ವೊಂದನ್ನು ಫೆಬ್ರವರಿ 3ರಂದು ರಿಲೀಸ್ ಮಾಡಲಿದ್ದಾರೆ. ಸ್ಯಾಂಡಲ್ ವುಡ್ ಮಾತ್ರವಲ್ಲದೆ ಟಾಲಿವುಡ್ ನಲ್ಲೂ ಮಿಂಚುತ್ತಿರುವ ಶ್ರೀಲೀಲಾ ಈ ಸಿನಿಮಾ ನಾಯಕಿಯಾಗಿ ಅಭಿನಯಿಸಿದ್ದಾರೆ.
BIG BREAKING: 5G ಮೊಬೈಲ್ ಸೇವೆ ಜಾರಿಗೆ ಕೇಂದ್ರ ನಿರ್ಧಾರ
ಹರಿ ಸಂತೋಷ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ನಡಿ ನಿರ್ಮಾಣ ಮಾಡಲಾಗಿದೆ. ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿರುವ ಚಿತ್ರತಂಡ ರಿಲೀಸ್ ಡೇಟ್ ಅನೌನ್ಸ್ ಮಾಡಲು ಸಜ್ಜಾಗಿದೆ. ಫೆಬ್ರವರಿ 3ರಂದು ಬೆಳಿಗ್ಗೆ 11-22ಕ್ಕೆ ಟೈಟಲ್ ಟ್ರ್ಯಾಕ್ ರಿಲೀಸ್ ಮಾಡಲಿದ್ದಾರೆ.
